alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಶಾಸಕರ ಹಾಜರಾತಿ ರಿಪೋರ್ಟ್

vidan

ಶಾಲೆಗೆ ಚಕ್ಕರ್, ಊಟಕೆ ಹಾಜರ್ ಲೆಕ್ಕದಿ ಬರಿ ಸೊನ್ನೆ ಎಂಬ ಮಾತನ್ನು ಶಾಲೆಗೆ ಬಂಕ್ ಹೊಡೆಯುವ ಮಕ್ಕಳಿಗೆ ಹೇಳಲಾಗುತ್ತದೆ.

ಈ ಮಾತನ್ನು ಈಗ ಮತ ಹಾಕಿ ಕಳುಹಿಸಿದ ಶಾಸಕರಿಗೂ ಹೇಳುವ ಕಾಲ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಶೇಷ ಮತ್ತು ತುರ್ತು ಅಧಿವೇಶನ ಸೇರಿದಂತೆ 13 ಬಾರಿ ಅಧಿವೇಶನ ನಡೆದಿದೆ.

ಇದರಲ್ಲಿ ಬೆಳಗಾವಿಯಲ್ಲಿ 3 ಬಾರಿ ನಡೆದ ಅಧಿವೇಶನ ಸೇರಿ ಒಟ್ಟು 183 ದಿನಗಳ ಕಾಲ ಕಲಾಪ ನಡೆದಿದೆ.

ಅಧಿವೇಶನದಲ್ಲಿ ಅತಿಹೆಚ್ಚು ಹಾಜರಾತಿ ಹೊಂದಿರುವುದು ಶಿವಮೊಗ್ಗ ಶಾಸಕ ಕೆ.ಬಿ. ಪ್ರಸನ್ನಕುಮಾರ್, ತುಮಕೂರು ಶಾಸಕ ರಫೀಕ್ ಅಹ್ಮದ್, ಶಿರಗುಪ್ಪಿ ಶಾಸಕ ಬಿ.ಎಂ. ನಾಗರಾಜ್. 183 ದಿನಗಳ ಅಧಿವೇಶನದಲ್ಲಿ ಈ ಮೂವರು ಶಾಸಕರು 181 ದಿನ ಹಾಜರಾಗಿದ್ದಾರೆ.

ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್, ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಸಕಲೇಶಪುರದ ಹೆಚ್.ಕೆ. ಕುಮಾರಸ್ವಾಮಿ, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ 180 ದಿನ ಕಲಾಪದಲ್ಲಿ ಪಾಲ್ಗೊಂಡಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್. ಲೋಬೋ 179 ದಿನ ಕಲಾಪದಲ್ಲಿ ಭಾಗವಹಿಸಿದ್ದಾರೆ.

ಕಲಾಪಕ್ಕೆ ಹಾಜರಾಗದೇ ಬೇಜವಾಬ್ದಾರಿ ತೋರಿದ ಶಾಸಕರಲ್ಲಿ ಹೊಸಪೇಟೆ ಶಾಸಕ ಆನಂದ್ ಸಿಂಗ್ 60 ದಿನ, ಕಂಪ್ಲಿ ಬೆಳಗಾವಿ ದಕ್ಷಿಣ ಶಾಸಕ ಸಂಭಾಜಿ ಪಾಟೀಲ್ 60 ದಿನ, ಗಂಗಾವತಿ ಇಕ್ಬಾಲ್ ಅನ್ಸಾರಿ 63 ದಿನ, ಕಂಪ್ಲಿ ಶಾಸಕ ಸುರೇಶ್ ಬಾಬು 69 ದಿನ, ಸಿ. ವಿ. ರಾಮನ್ ನಗರದ ಶಾಸಕ ರಘು 70 ದಿನ ಕಲಾಪದಲ್ಲಿ ಪಾಲ್ಗೊಂಡಿದ್ದಾರೆ.

26 ಜನ 170 ಕ್ಕೂ ಅಧಿಕ ದಿನ ಕಲಾಪದಲ್ಲಿ ಭಾಗವಹಿಸಿದ್ದು, 58 ಮಂದಿ ಶಾಸಕರು 150 ಕ್ಕೂ ಅಧಿಕ ದಿನ ಕಲಾಪದಲ್ಲಿ ಪಾಲ್ಗೊಂಡಿದ್ದಾರೆ. ಇನ್ನುಳಿದವರು ಕಷ್ಟಪಟ್ಟು 100 ದಿನದ ಗಡಿ ದಾಟಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...