alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಡಿಕಲ್ ವಿದ್ಯಾರ್ಥಿಗಳ ಸಾವಿಗೆ ಕಾರಣವಾಯ್ತು ಸೆಲ್ಫಿ

selfi

ಸೆಲ್ಫಿ ಕ್ರೇಜ್ ಈಗಂತೂ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಕಂಡಕಂಡಲ್ಲೆಲ್ಲಾ ಸೆಲ್ಫಿ ಕ್ಲಿಕ್ಕಿಸುವುದೇ ಕೆಲವರಿಗೆ ಖಯಾಲಿಯಾಗಿಬಿಟ್ಟಿದೆ. ಹೀಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಸಾವು ಕಂಡ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯ ಸಮೀಪದ ಹುಲಿವಾನ ಗ್ರಾಮದ ಬಳಿ ನಾಲೆಯೊಂದರಲ್ಲಿ ಈಜಾಡುತ್ತಾ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶ್ರುತಿ, ಗಿರೀಶ್ ಹಾಗೂ ಜೀವನ್ ಮೃತಪಟ್ಟ ವಿದ್ಯಾರ್ಥಿಗಳು. ಈ ಮೂವರು ಹಾಗೂ ಸಿಂಧು, ಗೌತಮ್ ಎಂಬುವವರು ಮಂಡ್ಯದಿಂದ ಸಮೀಪದಲ್ಲಿರುವ ನಾಲೆಗೆ ಹೋಗಿದ್ದು, ನೀರಿಗೆ ಇಳಿದಿದ್ದಾರೆ. ಇದನ್ನು ಕಂಡ ಜಮೀನು ಕೆಲಸಕ್ಕೆ ಹೋದವರು ನೀರಿನಲ್ಲಿ ಸೆಳೆತವಿದೆ ಇಳಿಯಬೇಡಿ ಎಂದು ಎಚ್ಚರಿಕೆ ನೀಡಿದ್ದರು.

ಆದರೂ, ಅದನ್ನು ಲೆಕ್ಕಿಸದೇ ವಿದ್ಯಾರ್ಥಿಗಳು ನೀರಿಗೆ ಇಳಿದು ಸೆಲ್ಫಿ ತೆಗೆದುಕೊಳ್ಳುವಾಗ, ಒಬ್ಬರು ನೀರಿನ ಸೆಳೆತಕ್ಕೆ ಸಿಲುಕಿದ್ದು, ಅವರನ್ನು ರಕ್ಷಿಸಲು ಹೋದ ಮತ್ತಿಬ್ಬರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಜಮೀನಿಗೆ ನೀರು ಹಾಯಿಸಲು ಹೋಗಿದ್ದ ರೈತರೊಬ್ಬರು ಇದನ್ನು ಕಂಡು ಅಪಾಯಕ್ಕೆ ಸಿಲುಕಿದ್ದ ಗೌತಮಿ ಅವರನ್ನು ರಕ್ಷಿಸಿದ್ದಾರೆ. ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...