alex Certify
ಕನ್ನಡ ದುನಿಯಾ       Mobile App
       

Kannada Duniya

ಇಬ್ಬರ ಸಾವಿಗೆ ಕಾರಣವಾಯ್ತು ಸೆಲ್ಫಿ ಕ್ರೇಜ್

selfie falls

ಚಿಕ್ಕಮಗಳೂರು: ಸೆಲ್ಫಿ ಕ್ರೇಜ್ ಇತ್ತೀಚೆಗೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಎಲ್ಲರಿಗಿಂತ ಭಿನ್ನವಾಗಿ, ವಿಶೇಷವಾಗಿ ಸೆಲ್ಫಿ ತೆಗೆದುಕೊಳ್ಳಬೇಕೆಂಬ ಧಾವಂತದಲ್ಲಿ ಅಪಾಯವನ್ನೂ ಲೆಕ್ಕಿಸದೇ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ.

ಹೀಗೆ, ಜಲಪಾತದ ಸೌಂದರ್ಯವನ್ನು ಹಿನ್ನಲೆಯಾಗಿಟ್ಟುಕೊಂಡು, ಸೆಲ್ಫಿ ತೆಗೆದುಕೊಳ್ಳಲು ಹೋದ ಇಬ್ಬರು ಸಾವು ಕಂಡ ಘಟನೆ ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟ್ ನ ಆಲೇಖಾನ್ ಫಾಲ್ಸ್ ಬಳಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ತುರುವನೂರಿನ 28 ವರ್ಷದ ನಾಗಭೂಷಣ್, 41 ವರ್ಷದ ಹನುಮಂತಪ್ಪ ಮೃತಪಟ್ಟವರು. ತುರುವನೂರು ಗ್ರಾಮದಲ್ಲಿ ಹೋಟೆಲ್ ಹೊಂದಿರುವ ಹನುಮಂತಪ್ಪ ತಮ್ಮ ಗೆಳೆಯರೊಂದಿಗೆ ಧರ್ಮಸ್ಥಳಕ್ಕೆ ಹೋಗಿದ್ದರು. ಅಲ್ಲಿಂದ ವಾಪಾಸ್ ಊರಿಗೆ ಹೊರಟಿದ್ದು, ಫಾಲ್ಸ್ ನೋಡಲು ತೆರಳಿದ್ದರು.

ಆಲೇಖಾನ್ ಫಾಲ್ಸ್ ನ ರಮಣೀಯ ದೃಶ್ಯಗಳನ್ನು ಹಿನ್ನಲೆಯಾಗಿಟ್ಟುಕೊಂಡು ನಾಗಭೂಷಣ್ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆಯತಪ್ಪಿದ್ದಾರೆ. ಅವರನ್ನು ರಕ್ಷಿಸಲು ಮುಂದಾದ ಹನುಮಂತಪ್ಪ ಕೂಡ ಬಿದ್ದಿದ್ದು, ಇಬ್ಬರೂ ಜಲಪಾತದಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಣಕಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...