alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ಹುಚ್ಚಿಗೆ ಯುವಕರಿಬ್ಬರ ದುಸ್ಸಾಹಸ ನೋಡಿ…!

ಸೆಲ್ಫಿ ಹುಚ್ಚಿಗಾಗಿ ಅದೆಷ್ಟೋ ಜನರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿರುವ ಘಟನೆಗಳನ್ನು ದಿನಂಪ್ರತಿ ನೋಡುತ್ತಲೇ ಇರುತ್ತೇವೆ. ಆದಾಗ್ಯೂ ಎಚ್ಚೆತ್ತುಕೊಳ್ಳದ ಯುವಕ-ಯುವತಿಯರು ಎಂತಹ ಅಪಾಯದ ಸಂದರ್ಭಗಳಿಗೂ ತಮ್ಮನ್ನು ಒಡ್ಡಿಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ.

ನಂಜನಗೂಡು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಸ ರೈಲ್ವೆ ಸೇತುವೆ ಬಳಿ ಸೆಲ್ಫಿ ಕ್ರೇಜಿಗಾಗಿ ಈ ಇಬ್ಬರು ಯುವಕರು ಮಾಡಿರುವ ದುಸ್ಸಾಹಸ ನೋಡಿ….

ಜೀವವನ್ನೇ ಪಣಕ್ಕಿಟ್ಟು ಈ ಇಬ್ಬರು ಯುವಕರು ಸೇತುವೆಯ ನಿಷೇಧಿತ ಸ್ಥಳಕ್ಕೆ ಹೋಗಿ, ಸೇತುವೆಯ ಕೆಳಭಾಗಕ್ಕೆ ಇಳಿದು ಪೋಸ್ ಕೊಡುತ್ತಿದ್ದಾರೆ. ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಸೇತುವೆಯ ಈ ಭಾಗದಲ್ಲಿ ನಿಂತ ಯುವಕರ ವಿಡಿಯೋ ಈಗ ವೈರಲ್ ಆಗಿದೆ.

ಒಂದೆಡೆ ಕಬಿನಿ ಜಲಾಶಯದ ಹೊರಹರಿವಿನಿಂದಾಗಿ ರಭಸದಿಂದ ಹರಿಯುತ್ತಿರುವ ಕಪಿಲಾನದಿ ನೀರು, ಇನ್ನೊಂದೆಡೆ ರೈಲ್ವೆ ಸೇತುವೆಯ ಅಪಾಯಭರಿತ ಸ್ಥಳದಲ್ಲಿ ನಿಂತು ಸೆಲ್ಫಿಗಾಗಿ ಪೋಸು….ಎದೆ ಝಲ್ ಎನಿಸುವ ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕ್ಷಣಿಕ ಮೋಜಿಗಾಗಿ ಯುವಕರ ಈ ಬೇಜವಾಬ್ದಾರಿ ದುಸ್ಸಾಹಸ ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...