alex Certify
ಕನ್ನಡ ದುನಿಯಾ       Mobile App
       

Kannada Duniya

ಡಿ.14 ರಂದು ರಾಜ್ಯಾದ್ಯಂತ ‘ಸೇಡ್’ ಚಿತ್ರ ತೆರೆಗೆ

‘ಸೇಡ್’ ಎಂಬ ಕನ್ನಡ ಚಲನಚಿತ್ರವು ಡಿ.14 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ನಟ ವಿಜಯ್ ಕಾರ್ತಿಕ್ ಹೇಳಿದರು.

ಶಿವಮೊಗ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೇಡ್’ ಚಲನಚಿತ್ರವು ಐವರು ಯುವಕರ ಸುತ್ತ ಹೆಣೆದ ಚಿತ್ರವಾಗಿದೆ. ಚಿತ್ರ ಕುತೂಹಲಕಾರಿಯಾಗಿದ್ದು, ಕೊನೆಯಲ್ಲಿ ಸಸ್ಪೆನ್ಸ್ ಇದೆ. ಸೇಡು ಎನ್ನುವುದು ಹೇಗೆ ಬದಲಾವಣೆಯಾಗುತ್ತಾ ಹೋಗುತ್ತದೆ. ಯಾರು ಯಾರು ಸೇಡು ತೀರಿಸಿಕೊಂಡರು ಎಂಬ ರಹಸ್ಯವೇ ಈ ಚಿತ್ರದ ಹೈಲೈಟ್ ಆಗಿದೆ ಎಂದರು.

ರಾಜ್ಯದ ಸುಮಾರು 78 ಚಿತ್ರಮಂದಿರಗಳಲ್ಲಿ ಇದು ಬಿಡುಗಡೆಯಾಗಲಿದೆ. ವಿಜಯ ಕಾರ್ತಿಕ್, ಶ್ರೀನಿಧಿ, ಯುವರಾಜ್, ಲಕ್ಷ್ಮೀನಾಯಕ್, ಯತೀಶ್ ಹಾಗೂ ಸುಲಕ್ಷಾ ಮತ್ತು ಭವ್ಯ ಚಿತ್ರದಲ್ಲಿ ನಟಿಸಿದ್ದಾರೆ. ರಿಪ್ಪನ್ ಕುಮಾರ್ ಗುಪ್ತಾ ಚಿತ್ರದ ನಿರ್ದೇಶಕರಾಗಿದ್ದಾರೆ.

ಸಂಗೀತವನ್ನು ದಿ:ಎಲ್.ಎನ್. ಶಾಸ್ತ್ರೀ ನೀಡಿದ್ದು, ಇದು ಅವರ ಕೊನೆಯ ಚಿತ್ರವಾಗಿದೆ. ಚಿತ್ರದಲ್ಲಿ ಒಂದು ಹಾಡು ಕೂಡ ಇದೆ ಎಂದರು. ಶಿವಮೊಗ್ಗದ ಮಾರ್ಡನ್ ಚಿತ್ರಮಂದಿರದಲ್ಲಿ ಈ ಚಿತ್ರವು ಬಿಡುಗಡೆಯಾಗಲಿದ್ದು, ಕನ್ನಡಿಗರು ಮತ್ತು ಇತರೆ ಎಲ್ಲ ಭಾಷೆಯವರು ಈ ಚಿತ್ರ ವೀಕ್ಷಿಸಿ ಯುವಕರ ತಂಡಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ನಟ ಶ್ರೀನಿಧಿ, ಪ್ರಪುಲ್ಲಾ ಚಂದ್ರ, ಎಂ.ಹೆಚ್. ಮಂಜುನಾಥಗೌಡ ಉಪಸ್ಥಿತರಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...