alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿನ ಮಾನವ ಶಾಸ್ತ್ರಜ್ಞೆ ನಿಗೂಢ ಕಣ್ಮರೆ

ಬೆಂಗಳೂರಿನ ಬೆಳ್ಳಂದೂರು ನಿವಾಸಿ ಅತ್ರೇಯಿ ಮಜುಮ್ದರ್ ಎಂಬಾಕೆ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದಾರೆ. 35 ವರ್ಷದ ಅತ್ರೇಯೀ ಮಾನವ ಶಾಸ್ತ್ರಜ್ಞೆ. ಟೊರಾಂಟೋದಲ್ಲಿ ಪಿಎಚ್ಡಿ ಮಾಡುತ್ತಿರುವ ಆಕೆ ಏಪ್ರಿಲ್ 4ರಂದು ಕೆನಡಾದಿಂದ ಬೆಂಗಳೂರಿಗೆ ಆಗಮಿಸಿದ್ದರು.

ವಿಮಾನ ನಿಲ್ದಾಣದಲ್ಲಿ ಅವಳನ್ನು ಬರಮಾಡಿಕೊಂಡ ಹೆತ್ತವರು ಬೆಂಗಳೂರಿನ ನಿವಾಸಕ್ಕೆ ಕರೆದೊಯ್ದಿದ್ದರು. ರಾತ್ರಿ 9 ಗಂಟೆಯವರೆಗೂ ಅತ್ರೇಯೀ ಮನೆಯಲ್ಲೇ ನಿದ್ದೆ ಮಾಡಿದ್ದಾರಂತೆ. ನಂತರ ಹ್ಯಾಂಡ್ ಬ್ಯಾಗ್ ಹಾಕಿಕೊಂಡು ಹೊರಕ್ಕೆ ಹೋದವರು ವಾಪಸ್ ಬಂದಿಲ್ಲ.

ಏಪ್ರಿಲ್ 4ರಂದು ಅತ್ರೇಯೀ ನೋವೋಟೆಲ್ ಹೋಟೆಲ್ ನಲ್ಲಿ ತಂಗಿದ್ದರು. ಏಪ್ರಿಲ್ 6ರಂದು ಮ್ಯಾರಿಯೆಟ್ ಹೋಟೆಲ್ ನಲ್ಲಿ ಚೆಕೌಟ್ ಮಾಡಿರೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆಕೆಯ ಜೊತೆಗೆ ಯಾರೂ ಇರಲಿಲ್ಲ, ಒಂಟಿಯಾಗಿದ್ದರು.

ಆಕೆ ಫೋನ್ ಸಹ ಬಿಟ್ಟು ಹೋಗಿದ್ದಾರಂತೆ. ಪಾಸ್ಪೋರ್ಟ್ ಹಾಗೂ ಸ್ವಲ್ಪ ಹಣವನ್ನು ಮಾತ್ರ ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ನಾಪತ್ತೆಯಾಗುವ ಎರಡು ದಿನಗಳ ಮುನ್ನ ಆಕೆ ಹೆತ್ತವರ ಫೋನ್ ಕರೆಯನ್ನು ಸಹ ಸ್ವೀಕರಿಸಿರಲಿಲ್ಲ.

ಮರುದಿನ ಕರೆಯನ್ನು ಸ್ವೀಕರಿಸಿ ಟೊರಾಂಟೋದಿಂದ ದೆಹಲಿಗೆ ಬಂದಿರುವುದಾಗಿ ತಿಳಿಸಿದ್ದರು. ನಂತರ ತಂದೆಯ ಸೂಚನೆ ಮೇರೆಗೆ ಬೆಂಗಳೂರಿಗೆ ಆಗಮಿಸಿದ್ದರು. ಅತ್ರೇಯೀ ಬಗ್ಗೆ ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಸ್ನೇಹಿತರು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...