alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಶಾಲಾ ಬಾಲಕನ ವಾಟರ್ ಬಾಟಲ್ ನಲ್ಲಿತ್ತು ಲಿಕ್ಕರ್…!!

ಬೆಂಗಳೂರಲ್ಲಿ ಮದ್ಯಸೇವನೆಯ ಚಟಕ್ಕೆ ಬಿದ್ದಿರೋ ಅಪ್ರಾಪ್ತರ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಪಬ್ ಹಾಗೂ ರೆಸ್ಟೋರೆಂಟ್ ಗಳು ಮಾಹಿತಿ ನೀಡಿದ್ವು. ಅದರ ಬೆನ್ನಲ್ಲೇ ರಿಯಾಲಿಟಿ ಚೆಕ್ ಗಿಳಿದ ಬೆಂಗಳೂರು ಶಾಲಾ ಆಡಳಿತ ಮಂಡಳಿಗಳು ನಿಜಕ್ಕೂ ಆಘಾತಕ್ಕೊಳಗಾಗಿವೆ.

ನೀರಿನ ಬಾಟಲಿಗಳು ಮತ್ತು ಜ್ಯೂಸ್ ಬಾಟಲಿಗಳಲ್ಲಿ ವಿದ್ಯಾರ್ಥಿಗಳು ಮದ್ಯ ತುಂಬಿಸಿಕೊಂಡು ಬಂದು, ಅದನ್ನು ಶಾಲೆಯಲ್ಲೇ ಕುಡಿಯುತ್ತಿರುವುದು ಬೆಳಕಿಗೆ ಬಂದಿದೆ. ಶಾಲೆಯ ಆವರಣದೊಳಕ್ಕೆ ವಿದ್ಯಾರ್ಥಿಗಳು ಮದ್ಯ ತಂದಿರುವ 16ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ನೀರಿನ ಜೊತೆ ಮದ್ಯ ಬೆರೆಸುವುದರಿಂದ ಅದರ ಬಣ್ಣಕೂಡ ತೆಳುವಾಗುತ್ತದೆ. ಜ್ಯೂಸ್ ಜೊತೆ ಅಲ್ಕೋಹಾಲ್ ಮಿಕ್ಸ್ ಮಾಡಿದ್ರಂತೂ ಪತ್ತೆ ಮಾಡೋದು ಕಷ್ಟ. ಹಾಗಾಗಿ ಈ ರೀತಿ ಐಡಿಯಾ ಮಾಡಿ ವಿದ್ಯಾರ್ಥಿಗಳು ಶಿಕ್ಷಕರನ್ನೇ ಯಾಮಾರಿಸುತ್ತಿದ್ದಾರೆ. ವಿದ್ಯಾರ್ಥಿಯೊಬ್ಬ ತರಗತಿಗೆ ಬಿಯರ್ ಬಾಟಲಿಯನ್ನೇ ತೆಗೆದುಕೊಂಡು ಬಂದಿದ್ದ.

ಸ್ನೇಹಿತರಿಗೆ ತೋರಿಸಲು ತಂದಿದ್ದಾಗಿ ಶಿಕ್ಷಕರ ಬಳಿ ಹೇಳಿದ್ದಾನೆ. ಇನ್ಮೇಲೆ ಪ್ರತಿ ತಿಂಗಳು ಒಮ್ಮೆಯಾದ್ರೂ ವಿದ್ಯಾರ್ಥಿಗಳನ್ನೆಲ್ಲ ಪರಿಶೀಲನೆ ನಡೆಸಲು ಎಲ್ಲಾ ಶಾಲೆಗಳು ನಿರ್ಧರಿಸಿವೆ. ಇದಕ್ಕೂ ಮೊದಲು ಶಾಲೆಯ ವಾರ್ಷಿಕೋತ್ಸವ, ಪ್ರವಾಸ ಮತ್ತು ಪಿಕ್ನಿಕ್ ಸಮಯದಲ್ಲಿ ಮಾತ್ರ ಪರಿಶೀಲನೆ ನಡೆಸಲಾಗುತ್ತಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...