alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ಡೀಸೆಲ್ ಖಾಲಿಯಾದ ಕಾರಣಕ್ಕೆ ಕಾಡಿನಲ್ಲಿ ಕಾಲ ಕಳೆದ ವಿದ್ಯಾರ್ಥಿಗಳು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಬೇಜವಾಬ್ದಾರಿತನದಿಂದಾಗಿ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳು, ಕಾಡಿನ ಹಾದಿಯಲ್ಲಿ ಮಧ್ಯರಾತ್ರಿಯವರೆಗೂ ಕಾಲ ಕಳೆದಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಬಳಿ ನಡೆದಿದೆ.

ತೀರ್ಥಹಳ್ಳಿ ಪಟ್ಟಣದ ಸೇವಾ ಭಾರತಿ ಶಾಲೆಯ 110 ಮಂದಿ ವಿದ್ಯಾರ್ಥಿಗಳು ಎರಡು ಬಸ್ಸುಗಳಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದು, ವಾಪಸ್ ಬರುವ ವೇಳೆ ಒಂದು ಬಸ್ಸಿನ ಡೀಸೆಲ್ ಖಾಲಿಯಾದ ಕಾರಣ ಬಾಳೆಹೊನ್ನೂರು-ಜಯಪುರದ ನಡುವಿನ ಕಾಡ ಹಾದಿಯಲ್ಲಿ ನಿಂತಿದೆ. ಇದರಿಂದಾಗಿ ಮತ್ತೊಂದು ಬಸ್ ಸಹ ಅಲ್ಲಿಯೇ ನಿಂತಿದೆ.

ಇದರಿಂದಾಗಿ ಆತಂಕಕ್ಕೊಳಗಾದ ಶಿಕ್ಷಕರು ಕೆ.ಎಸ್.ಆರ್.ಟಿ.ಸಿ. ಡಿಪೋ ಮ್ಯಾನೇಜರ್ ಹಾಗೂ ಕಂಟ್ರೋಲರ್ ಗೆ ಫೋನ್ ಮಾಡಿದರೂ ಸ್ಪಂದಿಸಿಲ್ಲವೆಂದು ಹೇಳಲಾಗಿದೆ. ಇತ್ತ ಶಾಲೆ ಬಳಿ ಮಕ್ಕಳಿಗಾಗಿ ಕಾದು ನಿಂತಿದ್ದ ಪೋಷಕರು ವಿಷಯ ತಿಳಿಯುತ್ತಿದ್ದಂತೆಯೇ ವಿವಿಧ ವಾಹನಗಳಲ್ಲಿ ತೆರಳಿ ಮಕ್ಕಳನ್ನು ಕರೆದುಕೊಂಡು ಬಂದಿದ್ದಾರೆ. ಶಾಲಾ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಬಸ್ ನಲ್ಲೇ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಆದರೆ ಈ ಬಸ್ಸುಗಳ ಅವ್ಯವಸ್ಥೆ ಮಾತ್ರ ಈ ರೀತಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...