alex Certify
ಕನ್ನಡ ದುನಿಯಾ       Mobile App
       

Kannada Duniya

ಚುಡಾಯಿಸಿದವನಿಗೆ ಬಾಲಕಿಯರು ಮಾಡಿದ್ದೇನು ಗೊತ್ತಾ..?

balak

ಬೆಳಗಾವಿ: ಹೆಣ್ಣು ಮಕ್ಕಳು ಹೊರಗಡೆ ಓಡಾಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಇದೆ. ಅದರಲ್ಲಿಯೂ ಶಾಲಾ- ಕಾಲೇಜುಗಳ ಬಳಿ ಬೀಡು ಬಿಡುವ ಪುಂಡ ಪೋಕರಿಗಳು, ಹೋಗಿ ಬರುವ ಹೆಣ್ಣು ಮಕ್ಕಳಿಗೆಲ್ಲಾ ಚುಡಾಯಿಸುವುದನ್ನು ಮಾಡುತ್ತಾರೆ. ಕೆಲವು ಕಡೆ ಇದಕ್ಕೆಲ್ಲಾ ಕಡಿವಾಣ ಬಿದ್ದಿದೆ.

ಮತ್ತೆ ಕೆಲವು ಕಡೆಗಳಲ್ಲಿ ಬಾಲಕರು ಕೂಡ ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಚುಡಾಯಿಸುತ್ತಾರೆ. ಹೀಗೆ ಹೆಣ್ಣು ಮಕ್ಕಳ ಶಾಲೆಗೆ ನುಗ್ಗಿದ ಬಾಲಕನೊಬ್ಬ ವಿದ್ಯಾರ್ಥಿನಿಯರಿಗೆ ಚುಡಾಯಿಸಿದ್ದಲ್ಲದೇ ಅಸಭ್ಯವಾಗಿ ವರ್ತಿಸಿದ್ದು, ಬಾಲಕಿಯರು ಸರಿಯಾಗಿಯೇ ಪಾಠ ಕಲಿಸಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಮೈದಾನದಲ್ಲಿ ವಿದ್ಯಾರ್ಥಿನಿಯರು ಇದ್ದ ಸಂದರ್ಭದಲ್ಲಿ ಬಂದ ಬಾಲಕನೊಬ್ಬ, ಪೋಲಿತನ ಪ್ರದರ್ಶಿಸಿ, ಚುಡಾಯಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಬಾಲಕಿಯರು ಅವನನ್ನು ಹಿಡಿದಿದ್ದಾರೆ.

ಆ ಬಾಲಕನನ್ನು ಹಿಡಿದ ಬಾಲಕಿಯರು ಸರಿಯಾಗಿಯೇ ಗೂಸಾ ಕೊಟ್ಟಿದ್ದಾರೆ. ನಂತರ ಶಾಲೆಯ ಮುಖ್ಯಸ್ಥರಿಗೆ ಹೇಳಿ, ಪೊಲೀಸರನ್ನು ಕರೆಸಿ ಅವರ ವಶಕ್ಕೆ ಒಪ್ಪಿಸಿದ್ದಾರೆ. ನಿಪ್ಪಾಣಿ ನಗರ ಠಾಣೆ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...