alex Certify
ಕನ್ನಡ ದುನಿಯಾ       Mobile App
       

Kannada Duniya

4 ದಿನದ ಲವ್, 2 ದಿನ ಮದುವೆ ನಂತರ ಆಗಿದ್ದೇನು?

girl mn 123

ಹುಬ್ಬಳ್ಳಿ: ಶಾಲೆಗೆ ಹೋಗುವ ಮುಗ್ಧ ಹೆಣ್ಣುಮಕ್ಕಳನ್ನು ವಂಚಿಸುವ ಅನೇಕ ಪ್ರಕರಣಗಳು ನಡೆದಿವೆ. ಇಂತಹ ಒಂದು ಅಮಾನವೀಯ ಪ್ರಕರಣದ ವರದಿ ಇಲ್ಲಿದೆ ನೋಡಿ. ಪ್ರೌಢಶಾಲೆಯಲ್ಲಿ ಓದುತ್ತಿದ್ದ ಬಾಲಕಿಯೊಬ್ಬಳನ್ನು ವಂಚಿಸಿದ ಘಟನೆ ವರಿಯಾಗಿದೆ.

ಬಿಜಾಪುರದಲ್ಲಿ 10ನೇ ತರಗತಿ ಓದುತ್ತಿದ್ದ ಬಾಲಕಿಯೊಬ್ಬಳನ್ನು ಪರಿಚಯ ಮಾಡಿಕೊಂಡ ಯುವಕನೊಬ್ಬ ಆಕೆಯನ್ನು ಪ್ರೀತಿಸುವುದಾಗಿ ನಾಟಕವಾಡಿದ್ದಾನೆ. ನೀನೆಂದರೆ ನನಗೆ ಇಷ್ಟ ಎಂದೆಲ್ಲಾ ನಂಬಿಸಿದ್ದಾನೆ. ಪಾಪ, ಮುಗ್ಧ ಬಾಲಕಿ ಈ ವಂಚಕನ ಮಾತು ಕೇಳಿ ಬಲೆಗೆ ಬಿದ್ದಿದ್ದಾಳೆ. 4 ದಿನ ಲವ್ ಮಾಡಿದ ಯುವಕ ನಂತರ ಮದುವೆಯಾಗೋಣ ಎಂದು ಹೇಳಿದ್ದಾನೆ. ಪರಿಚಯವಾದ 5ನೇ ದಿನಕ್ಕೆ ಮದುವೆಯೂ ಆಗಿದೆ. ಮದುವೆ ನಡೆದ 2 ದಿನದ ಬಳಿಕ ಯುವಕ ನಾಪತ್ತೆಯಾಗಿದ್ದಾನೆ.

ಹನಿಮೂನ್ ಗೆ ಹೋಗೋಣ ಎಂದು ರೈಲ್ವೇಸ್ಟೇಷನ್ ಗೆ ಕರೆದುಕೊಂಡು ಬಂದು ಟಿಕೆಟ್ ಕೂಡ ಕೊಡಿಸಿದ್ದು, ಇಲ್ಲೇ ಹೋಗಿ ಬರುತ್ತೇನೆ ಎಂದವ ನಾಪತ್ತೆಯಾಗಿದ್ದಾನೆ. ದಿಕ್ಕು ತೋಚದ ಬಾಲಕಿ ರೈಲು ಹತ್ತಿ ಸೀದಾ ಹುಬ್ಬಳ್ಳಿಗೆ ಬಂದಿದ್ದಾಳೆ. ಅಲ್ಲಿ ಒಂಟಿಯಾಗಿ ನಿಂತಿದ್ದ ಬಾಲಕಿಯನ್ನು ಪೊಲೀಸರು ಹುಬ್ಬಳ್ಳಿ ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...