alex Certify
ಕನ್ನಡ ದುನಿಯಾ       Mobile App
       

Kannada Duniya

ಸೋರುತಿಹುದು ಜ್ಞಾನದೇಗುಲ; ನಿದ್ರಿಸುತ್ತಿದೆಯೇ ಸರ್ಕಾರ..?

school building

ಬಿರುಕು ಬಿಟ್ಟ ಗೋಡೆಗಳು, ಸೋರುವ ಸೂರು, ಹಾವು- ಚೇಳುಗಳ ಕಾಟ, ಕಿಟಕಿ ಬಾಗಿಲುಗಳಿಲ್ಲ… ಇದು 2015-16 ಸಾಲಿನ ಶೈಕ್ಷಣಿಕ ವಿಶ್ಲೇಷಣಾ ವರದಿಯಲ್ಲಿ ಸಿಕ್ಕ ಮಾಹಿತಿ.

ವಿಶ್ಲೇಷಣಾ ವರದಿಯ ಪ್ರಕಾರ ರಾಜ್ಯದ 33 ಸಾವಿರ ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಈ ಕಾರಣದಿಂದಾಗಿ ಪಾಲಕರಿಗೆ ಹಾಗೂ ಮಕ್ಕಳಿಗೆ ಶಾಲೆ ದುಃಸ್ವಪ್ನವಾಗಿ ಕಾಡತೊಡಗಿದೆ. ಈಗಾಗಲೇ ಬೆಳಗಾವಿ ಜಿಲ್ಲೆಯ ಯಮನಕರಡಿಯಲ್ಲಿ  ಶಿಥಿಲಗೊಂಡಿದ್ದ ಕಟ್ಟಡ ಇಬ್ಬರು ಮಕ್ಕಳನ್ನು ಬಲಿತೆಗೆದುಕೊಂಡಿದೆ. ಇನ್ನು ಎಷ್ಟು ಜೀವಗಳ ಬಲಿ ಆಗಬೇಕೋ ಗೊತ್ತಿಲ್ಲ.

ಕಿರಿಯ ಹಾಗೂ ಪ್ರೌಢಶಾಲೆಗಳು ಸೇರಿದಂತೆ ಕೆಲವು ಶಾಲೆಗಳಲ್ಲಿ ಸಣ್ಣ ಪ್ರಮಾಣದ ರಿಪೇರಿಯ ಅಗತ್ಯವಿದೆ. ಇನ್ನೂ ಕೆಲವು ಕೊಠಡಿಗಳಿಗೆ ಪೂರ್ಣ ದುರಸ್ತಿಯ ಅಗತ್ಯವಿದ್ದು ಶಿಕ್ಷಕರು ಬಯಲಿನಲ್ಲಿ ಪಾಠ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ದುರಸ್ತಿ ಕಾರ್ಯಕ್ಕೆ ಮುಂದಾಗಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...