alex Certify
ಕನ್ನಡ ದುನಿಯಾ       Mobile App
       

Kannada Duniya

ವಿಜಯ್ ಮಲ್ಯಗೆ ಎದುರಾಯ್ತಾ ಬಂಧನ ಭೀತಿ..?

mallya-kjzB--621x414@LiveMint

ಸಾಲದ ಸುಳಿಯಲ್ಲಿ ಸಿಲುಕಿರುವ ಯುಬಿ ಗ್ರೂಪ್‌ ನ ಪ್ರವರ್ತಕ ವಿಜಯ್ ಮಲ್ಯ ಅವರನ್ನು ಬಂಧಿಸುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಸಾಲ ವಸೂಲಾತಿ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದು, ಹಾಗಾಗಿ ಮಲ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಬರೋಬ್ಬರಿ 7,800 ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡಿರುವ ವಿಜಯ್ ಮಲ್ಯ ಅವರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಎಸ್‌ ಬಿ ಐ ನೇತೃತ್ವದ 17 ಬ್ಯಾಂಕ್‌ ಗಳ ಒಕ್ಕೂಟ ಬೆಂಗಳೂರಿನಲ್ಲಿರುವ ಸಾಲ ವಸೂಲಾತಿ ನ್ಯಾಯಾಧೀಕರಣಕ್ಕೆ ಈ ಅರ್ಜಿ ಸಲ್ಲಿಸಿದ್ದು, ಮಲ್ಯ ಅವರನ್ನು ಬಂಧಿಸುವುದರ ಜೊತೆಗೆ ತಕ್ಷಣವೇ ಮಲ್ಯ ಅವರ ಪಾಸ್‌ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಮನವಿ ಮಾಡಿವೆ.

ವಿಶೇಷವೆಂದರೆ ಇತ್ತೀಚೆಗೆ ಯುನೈಟೆಡ್ ಸ್ಪಿರಿಟ್ಸ್‌ ನ ಅಧ್ಯಕ್ಷ ಸ್ಥಾನ ತ್ಯಜಿಸಿ ಹೊರ ಬಂದಿದ್ದ ಮಲ್ಯ ಅವರಿಗೆ ಬ್ರಿಟನ್ ಕಂಪನಿ 515 ಕೋಟಿ ರೂ. ಹಣವನ್ನು ನೀಡಿತ್ತು. ಈ ಹಣವನ್ನಾದರೂ ಮುಟ್ಟುಗೋಲು ಹಾಕಿಕೊಳ್ಳುವ ನಿಟ್ಟಿನಲ್ಲಿ ಬ್ಯಾಂಕ್ ಗಳು ಮುಂದಾಗಿವೆ ಎನ್ನಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...