alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿನಲ್ಲಿ ಶಶಿಕಲಾರ ಆ 15 ದಿನಗಳು….

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರೋ ವಿವಿಐಪಿ ಖೈದಿಗಳಿಗೆ ರಾಜೋಪಚಾರ ಮಾಡ್ತಿರೋ ಬಗ್ಗೆ ಡಿಐಜಿ ಡಿ. ರೂಪಾ ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ರೂಪಾರನ್ನು ಜೈಲಿನ ಡಿಐಜಿಯಾಗಿ ಜನವರಿ 1ರಂದು ನೇಮಕ ಮಾಡಲಾಗಿತ್ತು. 6 ತಿಂಗಳು ರಜೆಯಲ್ಲಿದ್ದ ಅವರು ಜೂನ್ 23ರಂದು ಕರ್ತವ್ಯಕ್ಕೆ ಹಾಜರಾಗಿದ್ದರಂತೆ.

ಸರ್ಕಾರಿ ರಜಾದಿನಗಳನ್ನೆಲ್ಲ ಬಿಟ್ಟು ರೂಪಾ ಅಲ್ಲಿ ಕರ್ತವ್ಯ ನಿರ್ವಹಿಸಿದ್ದು ಕೇವಲ 17 ದಿನಗಳು ಮಾತ್ರ. ಪರಪ್ಪನ ಅಗ್ರಹಾರದಲ್ಲಿ ಖೈದಿಗಳಿಗೆ ವಿವಿಐಪಿ ಟ್ರೀಟ್ಮೆಂಟ್ ಸಿಗ್ತಿದೆ ಅನ್ನೋ ಮಾಹಿತಿ ಪತ್ರಕರ್ತರಿಂದ ರೂಪಾಗೆ ತಿಳಿದಿತ್ತು. ಎರಡು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗ್ತಾ ಇದ್ರೂ ರೂಪಾ, ಶಶಿಕಲಾರನ್ನು ಭೇಟಿಯಾಗಿರಲಿಲ್ಲ.

ಜುಲೈ 10ರಂದು ರೌಂಡ್ಸ್ ಗೆ ತೆರಳಿದ್ದ ಡಿಐಜಿ ರೂಪಾ, ಜೈಲಿನಲ್ಲಿ ಶಶಿಕಲಾರ ಐಷಾರಾಮಿ ಜೀವನವನ್ನು ಕಣ್ಣಾರೆ ಕಂಡಿದ್ರು. ಶಶಿಕಲಾಗೆ ಐದು ಸೆಲ್ ಹಾಗೂ ಒಂದು ಓಪನ್ ಕಾರಿಡಾರ್ ಮೀಸಲಿಡಲಾಗಿತ್ತು. ಕೋಣೆಯಲ್ಲಿ ಹೊಸ ಎಲ್ ಇ ಡಿ ಟಿವಿ ಇತ್ತು. ಮ್ಯಾಟ್ರೆಸ್, ವಿಶೇಷ ಉಡುಪು ಹೀಗೆ ಸಕಲ ಸೌಲಭ್ಯವನ್ನೂ ಕಲ್ಪಿಸಲಾಗಿತ್ತು.

ಇದನ್ನೆಲ್ಲ ಪ್ರತ್ಯಕ್ಷವಾಗಿ ನೋಡಿದ ಡಿಐಜಿ ರೂಪಾ, ಅಕ್ರಮಗಳ ಬಗ್ಗೆ ವರದಿ ನೀಡಿದ್ರು. ಆದ್ರೆ ಆ ಪ್ರಾಮಾಣಿಕತೆಯೇ ಅವರಿಗೆ ಕುತ್ತಾಗಿದೆ. ಭ್ರಷ್ಟಾಚಾರ ಬಯಲಿಗೆಳೆದ ತಪ್ಪಿಗೆ ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...