alex Certify
ಕನ್ನಡ ದುನಿಯಾ       Mobile App
       

Kannada Duniya

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ….ವೀಕ್ಷಿಸಿದ ಮಾಜಿ ಸಿಎಂ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಚಿತ್ರವನ್ನು ವೀಕ್ಷಿಸಿದ್ದಾರೆ.

ಮೈಸೂರಿನ ಡಿಆರ್‍ಸಿ ಮಾಲ್ ನಲ್ಲಿ ಶನಿವಾರ ಈ ಚಿತ್ರ ವೀಕ್ಷಿಸಿದ ಸಿದ್ದರಾಮಯ್ಯ, ಅಪ್ಪಟ ಕನ್ನಡ ಸೊಗಡಿನ ಚಿತ್ರ ಇದಾಗಿದ್ದು, ಕಲಾತ್ಮಕವಾಗಿ ಮೂಡಿ ಬಂದಿದ್ದರೂ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದೆ. ಹೊಸ ಬಗೆಯ ಪ್ರಯೋಗಾತ್ಮಕ ಚಿತ್ರ ಅನ್ನಿಸುತ್ತಿದೆ ಎಂದರು.

ಇದೇ ವೇಳೆ ತಮ್ಮ ಲಂಡನ್ ಪ್ರವಾಸದ ಬಗ್ಗೆ ಹೇಳಿದ ಸಿದ್ದರಾಮಯ್ಯ, ಸೆಪ್ಟೆಂಬರ್ 3ಕ್ಕೆ ನಾನು, ನನ್ನ ಮಗ ವಿದೇಶ ಪ್ರವಾಸ ಹೊರಡುತ್ತಿದ್ದೇವೆ. ಲಂಡನ್ ನಲ್ಲಿ ಓರ್ವ ಗೆಳೆಯನಿದ್ದು, ತುಂಬಾ ದಿನಗಳಿಂದ ತಮ್ಮ ಮನೆಗೆ ಬರಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಹಾಗಾಗಿ ಹೋಗಿ ಬರುವುದಾಗಿ ತಿಳಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...