alex Certify
ಕನ್ನಡ ದುನಿಯಾ       Mobile App
       

Kannada Duniya

ಕುತ್ತಿಗೆಗೆ ಲಾಂಗ್ ಇಟ್ಟು ಎಸಗಿದ್ರು ಇಂತಹ ಕೃತ್ಯ

ಬೆಂಗಳೂರು: ಭದ್ರತಾ ಸಿಬ್ಬಂದಿಯ ಕುತ್ತಿಗೆಗೆ ಲಾಂಗ್ ಹಿಡಿದು, 2 ಶ್ರೀಗಂಧದ ಮರಗಳನ್ನು ಕಳವು ಮಾಡಿರುವ ಘಟನೆ ಬೆಂಗಳೂರು ಮಲ್ಲೇಶ್ವರಂ 15 ನೇ ಕ್ರಾಸ್ ಸಿ.ವಿ. ರಾಮನ್ ನಗರದಲ್ಲಿ ನಡೆದಿದೆ.

ಸರ್ಕಾರಿ ಒಡೆತನದ ಮನೆ ಆವರಣದಲ್ಲಿದ್ದ 16 ಮತ್ತು 10 ಅಡಿಯ 2 ಮರಗಳನ್ನು ದೋಚಲಾಗಿದೆ. ಬೆಳಗಿನ ಜಾವ 3.30 ರ ಸುಮಾರಿಗೆ 2 ಒಮಿನಿಗಳಲ್ಲಿ ಆಗಮಿಸಿದ್ದ 6 ಮಂದಿ, ಭದ್ರತೆಯಲ್ಲಿದ್ದ ಗಂಗಾಧರ್ ಹಾಗೂ ಶ್ರೀನಿವಾಸ್ ಅವರನ್ನು ಮಾರಕಾಸ್ತ್ರಗಳಿಂದ ಬೆದರಿಸಿದ್ದಾರೆ.

ಅವರ ಕುತ್ತಿಗೆಗೆ ಲಾಂಗ್ ಹಿಡಿದು ಕ್ಷಣಾರ್ಧದಲ್ಲಿ ಮರಗಳನ್ನು ಕತ್ತರಿಸಿಕೊಂಡು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಶ್ವಾನದಳದೊಂದಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...