alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕರು, ಉಪನ್ಯಾಸಕರಿಗೆ ಇಲ್ಲಿದೆ ಒಂದು ಮಾಹಿತಿ

ಬೆಂಗಳೂರು: ಗುತ್ತಿಗೆಯ ಆಧಾರದಲ್ಲಿ ನೇಮಕವಾಗಿ ನಂತರ ಕಾಯಂ ಆದ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಮಾಹಿತಿಯೊಂದು ಇಲ್ಲಿದೆ. ಇಂತಹ ಉಪನ್ಯಾಸಕರು ಮತ್ತು ಶಿಕ್ಷಕರ ವೇತನ, ಪಿಂಚಣಿಯ ಸುತ್ತೋಲೆಯನ್ನು ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ತಡೆ ಹಿಡಿದಿದೆ.

ವೇತನ, ಪಿಂಚಣಿ ಪರಿಷ್ಕರಣೆಗಾಗಿ ರಚಿಸಿರುವ ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅಧ್ಯಕ್ಷತೆಯ ಸಮಿತಿ ವರದಿ ನೀಡಿದ ಬಳಿಕ, ಸೂಕ್ತ ನಿರ್ಧಾರ ಕೈಗೊಳ್ಳುವವರೆಗೆ ಜಾರಿಯಲ್ಲಿರುತ್ತದೆ ಎಂದು ಶಿಕ್ಷಣ ಇಲಾಖೆ ಹೇಳಿದೆ. ರಾಜ್ಯದಲ್ಲಿ 1983 ರಿಂದ 86 ರ ವರೆಗಿನ ಅವಧಿಯಲ್ಲಿ 10,000 ಕ್ಕೂ ಅಧಿಕ ಉಪನ್ಯಾಸಕರು ಮತ್ತು ಶಿಕ್ಷಕರನ್ನು ಗುತ್ತಿಗೆ ಆಧಾರದ ಅಡಿ ನೇಮಕ ಮಾಡಿ, ನಂತರದಲ್ಲಿ ಕಾಯಂಗೊಳಿಸಲಾಗಿತ್ತು. ಕಾಯಂ ಸಿಬ್ಬಂದಿಗಳಿಗೆ ನೀಡಲಾಗುವ ಮೂಲ ವೇತನವನ್ನು ಮಾತ್ರ ಗುತ್ತಿಗೆ ನೌಕರರಿಗೆ ಪಾವತಿಸಲಾಗಿದ್ದು, ಕಾಯಂಗೊಂಡ ಬಳಿಕ ಗುತ್ತಿಗೆ ಅವಧಿಯನ್ನು ಕೂಡ ಪರಿಗಣಿಸಿ ವೇತನ ಬಡ್ತಿ ನೀಡಲಾಗಿದೆ.

ನಿಯಮ ಉಲ್ಲಂಘಿಸಿ 7 ಸಲ ವೇತನ ಬಡ್ತಿ ನೀಡಲಾಗಿದೆ ಎಂದು ಸರ್ಕಾರ ಪಿಂಚಣಿ ಮೊತ್ತದಲ್ಲಿ ಅದನ್ನು ವಾಪಸ್ ಪಡೆಯಬೇಕೆಂದು ಸೂಚಿಸಿದೆ. ಇಂತಹ ನೌಕರರಿಗೆ ವೇತನ, ಪಿಂಚಣಿ ಪರಿಷ್ಕರಣೆಗೆ 2017 ರ ಡಿಸೆಂಬರ್ 7 ರಂದು ಸುತ್ತೋಲೆ ಹೊರಡಿಸಲಾಗಿದೆ.

ಗುತ್ತಿಗೆ ಆಧಾರದಲ್ಲಿ ಸೇವೆಯಲ್ಲಿದ್ದ ಅನೇಕ ಶಿಕ್ಷಕರು, ಉಪನ್ಯಾಸಕರು ನಿವೃತ್ತರಾಗಿದ್ದಾರೆ. ಪಿಂಚಣಿಯಲ್ಲಿ ಕಡಿತವಾದರೆ, ತೊಂದರೆಯಾಗಲಿದೆ ಸರ್ಕಾರದ ಸುತ್ತೋಲೆಯನ್ನು ಹಿಂಪಡೆಯಬೇಕೆಂದು ಶಿಕ್ಷಕರು, ಉಪನ್ಯಾಸಕರು ಆಗ್ರಹಿಸಿದ್ದರು. ಈಗ ಸರ್ಕಾರ ಸುತ್ತೋಲೆಗೆ ತಡೆ ನೀಡಿರುವುದರಿಂದ ಶಿಕ್ಷಕರು, ಉಪನ್ಯಾಸಕರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...