alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಗಂದೂರು ಲಾಂಚ್ ಬಳಿ ಪ್ರವಾಸಿಗರಿಬ್ಬರು ನೀರು ಪಾಲು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಿಗಂದೂರು ಬಳಿ ಪ್ರವಾಸಿಗರಿಬ್ಬರು ನೀರು ಪಾಲಾಗಿದ್ದಾರೆ. ಲಾಂಚ್ ನಿಲ್ದಾಣದ ಬಳಿ ಈಜಲು ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಕುಮಾರ್(18), ಸಂತೋಷ್(21) ನೀರು ಪಾಲಾದವರೆಂದು ಗುರುತಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲ್ಲೂಕಿನವರಾದ ಇವರಿಬ್ಬರನ್ನೊಳಗೊಂಡ 12 ಮಂದಿ ಸ್ನೇಹಿತರ ತಂಡ ಪ್ರವಾಸಕ್ಕೆ ಬಂದಿತ್ತು.

ಲಾಂಚ್ ನಿಲ್ದಾಣದ ಬಳಿ ಹಿನ್ನೀರಿನಲ್ಲಿ ಈಜಲು ಹೋದಾಗ ಕುಮಾರ್ ಮತ್ತು ಸಂತೋಷ್ ನೀರು ಪಾಲಾಗಿದ್ದು, ಹುಡುಕಾಟ ನಡೆಸಲಾಗಿದೆ. ಸ್ಥಳಕ್ಕೆ ಸಾಗರ ಗ್ರಾಮಾಂತರ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...