alex Certify
ಕನ್ನಡ ದುನಿಯಾ       Mobile App
       

Kannada Duniya

ದ್ವಿಚಕ್ರ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್..!

ಬೆಂಗಳೂರು: ಒಂದು ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಮಾಡಿದರೆ, ನಿಯಮ ಉಲ್ಲಂಘನೆಯಾಗುತ್ತದೆ. ಇನ್ಮೇಲೆ ಮೂವರಲ್ಲ, ಇಬ್ಬರೂ ಕೂಡ ಬೈಕ್ ನಲ್ಲಿ ಹೋಗುವಂತಿಲ್ಲ.

ಕರ್ನಾಟಕ ಮೋಟಾರ್ ವಾಹನ ಕಾಯ್ದೆಯಡಿ ಹೊಸ ನಿಯಮ ಜಾರಿಗೆ ತರಲಾಗಿದೆ. 100 ಸಿ.ಸಿ. ಬೈಕ್ ಸವಾರರು ಹಿಂಬದಿ ಸವಾರರನ್ನು ಕೂರಿಸಿಕೊಳ್ಳುವಂತಿಲ್ಲ.

ಈಗಾಗಲೇ ರಿಜಿಸ್ಟ್ರೇಷನ್ ಆಗಿರುವ ಬೈಕ್ ಗಳಿಗೆ ಇದು ಅನ್ವಯಿಸಲ್ಲ. ಹೊಸ ರಿಜಿಸ್ಟ್ರೇಷನ್ ದ್ವಿಚಕ್ರವಾಹನಗಳಿಗೆ ಇದು ಅನ್ವಯವಾಗಲಿದೆ. ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಆರ್.ಟಿ.ಓ.ಗಳಿಗೆ ನಿರ್ದೇಶನ ನೀಡಲಾಗಿದೆ.

100 ಸಿ.ಸಿ. ಸಾಮರ್ಥ್ಯಕ್ಕಿಂತ ಕಡಿಮೆ ಇರುವ ಎಲ್ಲಾ ದ್ವಿಚಕ್ರವಾಹನಗಳಲ್ಲಿ ಹಿಂಬದಿ ಸವಾರರ ಸಂಚಾರಕ್ಕೆ ನಿಷೇಧಿಸಲಾಗಿದೆ. ಇನ್ಮೇಲೆ 100 ಸಿ.ಸಿ. ಒಳಗಿನ ದ್ವಿಚಕ್ರವಾಹನಗಳಲ್ಲಿ ಒಂದೇ ಸೀಟು ಅಳವಡಿಸಲು ಸೂಚನೆ ನೀಡಲಾಗಿದೆ.

ಕಾಯ್ದೆಯನ್ನು ಮೀರಿದಲ್ಲಿ ಅಂತಹ ವಾಹನಗಳ ಜಪ್ತಿ ಮಾಡಿ, ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...