alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಜಿ ಸತ್ಯನಾರಾಯಣಗೆ ತಿರುಗೇಟು ನೀಡಿದ ಡಿಐಜಿ ರೂಪಾ

08-roopa-moudgil-big1

ಪರಪ್ಪನ ಅಗ್ರಹಾರದಲ್ಲಿ ಅವ್ಯವಹಾರ ನಡೆದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಾರಾಗೃಹ ಡಿಜಿ ಹಾಗೂ ಕಾರಾಗೃಹ ಡಿಐಜಿ ನಡುವೆ ತಿಕ್ಕಾಟ ಶುರುವಾಗಿದೆ. ಕಾರಾಗೃಹ ಡಿಐಜಿ ರೂಪಾ ನೀಡಿರುವ ವರದಿಯಲ್ಲಿರುವ ಆರೋಪವನ್ನು ಡಿಜಿ ಸತ್ಯನಾರಾಯಣ ರಾವ್ ತಳ್ಳಿ ಹಾಕಿದ್ದಾರೆ. ರೂಪಾ ಬಾಯಿಗೆ ಬಂದಂತೆ ಬರೆದಿದ್ದಾರೆಂದು ಪ್ರತಿಕ್ರಿಯೆ ನೀಡಿದ್ದಾರೆ. ಅವರ ಆರೋಪಕ್ಕೆ ಸಾಕ್ಷಿ ಏನಿದೆ ಎಂದು ಸತ್ಯನಾರಾಯಣ ರಾವ್ ಪ್ರಶ್ನಿಸಿದ್ದಾರೆ.

ಡಿಜಿ ಸತ್ಯನಾರಾಯಣ್ ರಾವ್ ಪ್ರತಿಕ್ರಿಯೆಗೆ ರೂಪಾ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ರೂಪಾ, ವರದಿಯಲ್ಲಿ ಸುಳ್ಳಿದ್ದರೆ ತನಿಖೆ ನಡೆಯಲಿ ಎಂದಿದ್ದಾರೆ. ನಾಲ್ಕು ಪುಟಗಳ ವರದಿ ನೀಡಿದ್ದೇನೆ. ಸಾಕ್ಷ್ಯಾಧಾರವಿದ್ದೇ ವರದಿ ನೀಡಿದ್ದೇನೆ.  ಸತ್ಯವನ್ನು ಉಲ್ಲೇಖ ಮಾಡಿದ್ದೇನೆ. ವದಂತಿಯನ್ನು ವದಂತಿ ಎಂದು ಹೇಳಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕೆಂದು ವರದಿಯಲ್ಲಿ ಹೇಳಿದ್ದೇನೆಂದು ರೂಪಾ ಹೇಳಿದ್ದಾರೆ.

ಡಿಐಜಿ ರೂಪಾ, ಡಿಜಿಪಿ ಹೆಚ್ ಎಸ್ ಎನ್ ರಾವ್  ಅವರಿಗೆ ನೀಡಿದ ವರದಿಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ವಿವರವಾಗಿ ಹೇಳಿದ್ದರು. ಶಶಿಕಲಾ, ಕರೀಂ ಲಾಲ್ ತೆಲಗಿಗೆ ಜೈಲಿನಲ್ಲಿ ಐಷಾರಾಮಿ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...