alex Certify
ಕನ್ನಡ ದುನಿಯಾ       Mobile App
       

Kannada Duniya

ತಮ್ಮ ಹತ್ಯೆ ಸಂಚಿನ ಕುರಿತು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?

ಕುಖ್ಯಾತ ರೌಡಿ ಸೈಕಲ್ ರವಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ ವೇಳೆ, ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಅವರ ಹತ್ಯೆಗೆ 2 ವರ್ಷಗಳ ಹಿಂದೆ ಸಂಚು ನಡೆದಿತ್ತು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿತ್ತು.

ಬೆಂಗಳೂರು ಹೊರವಲಯದಲ್ಲಿ ನಡೆದ ಪಾರ್ಟಿಯೊಂದರಲ್ಲಿ ರೌಡಿಗಳು ಪಾಲ್ಗೊಂಡಿದ್ದ ವೇಳೆ ಹತ್ಯೆ ಕುರಿತು ಮಾತನಾಡಲಾಗಿತ್ತೆನ್ನಲಾಗಿದ್ದು, ಬಳಿಕ ಇದಕ್ಕೆ ಸಂಚು ರೂಪಿಸಲು ಸಾಧ್ಯವಾಗಿರಲಿಲ್ಲವಾದರೂ ಮತ್ತೊಬ್ಬ ರೌಡಿ ಕೋದಂಡ ಎಂಬಾತ ಹೆಚ್ಚಿನ ಆಸಕ್ತಿ ಹೊಂದಿದ್ದ ಎಂಬ ಅಂಶ ಸೈಕಲ್ ರವಿ ವಿಚಾರಣೆ ವೇಳೆ ಬಯಲಾಗಿತ್ತು.

ಕೋದಂಡ ಈಗ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆ ಬಳಿಕ ಹೆಚ್ಚಿನ ಮಾಹಿತಿ ಹೊರ ಬೀಳಬಹುದೆಂದು ಹೇಳಲಾಗುತ್ತಿರುವ ಮಧ್ಯೆ ತಮ್ಮ ಹತ್ಯೆ ಸಂಚಿನ ಕುರಿತು ರಾಕಿಂಗ್ ಸ್ಟಾರ್ ಯಶ್ ಮಾತನಾಡಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಯಶ್ ಎರಡು ವರ್ಷಗಳ ಹಿಂದೆ ತಾವು ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿದ್ದು ನಿಜ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಈ ಸಂದರ್ಭದಲ್ಲಿ ತಾವು ಹೆಚ್ಚೇನೂ ಹೇಳಬಯಸುವುದಿಲ್ಲ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...