alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಡಿಗೆಗೆ ಸಿಗುವ ಮಿತ್ರ ರೋಬೋಟ್ ಮಾಡುತ್ತೆ ಈ ಎಲ್ಲ ಕೆಲಸ

ಹುಟ್ಟುಹಬ್ಬ, ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಇನ್ಮುಂದೆ ಫೋಟೋಗ್ರಾಫರ್ ಹುಡುಕಾಟ ನಡೆಸಬೇಕಾಗಿಲ್ಲ. ರೋಬೋಟ್ ಈ ಕೆಲಸ ಮಾಡುತ್ತದೆ. ಮದುವೆ, ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ರೋಬೋಟ್ ಗಳು ಬಾಡಿಗೆ ಸಿಗುತ್ವೆ. ಬೆಂಗಳೂರಿನ ಇನ್ವೆನ್ಟೋ ರೊಬೊಟಿಕ್ಸ್ ಕಂಪನಿ ರೋಬೋಟ್ ಗಳನ್ನು ಬಾಡಿಗೆಗೆ ನೀಡ್ತಿದೆ.

ಈ ಕಂಪನಿಯ ರೋಬೋಟ್ ಮಂಗಳವಾರ ಹೈದ್ರಾಬಾದ್ ನಲ್ಲಿ ನಡೆದ ಜಾಗತಿಕ ಉದ್ಯಮಶೀಲತಾ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಇವಾಂಕ ಟ್ರಂಪ್ ಸೇರಿದಂತೆ ಗಣ್ಯರನ್ನು ಸ್ವಾಗತಿಸಿತ್ತು. ಭಾರತದಲ್ಲಿ ತಯಾರಾಗಿರುವ ಮಿತ್ರ ಹೆಸರಿನ ಈ ರೋಬೋಟ್ ಫೋಟೋಗ್ರಫಿ, ಡಿಜೆ ಹಾಗೂ ಮನರಂಜನೆ ನೀಡುವ ಕೆಲಸ ಮಾಡುತ್ತದೆ.

ಈ ರೋಬೋಟ್ ಬೆಲೆ ಎಂಟು ಲಕ್ಷ ರೂಪಾಯಿ. ಬಾಡಿಗೆಗೆ ಪಡೆಯುವುದಾದಲ್ಲಿ ಬೇರೆ ಬೇರೆ ಕಾರ್ಯಕ್ರಮಗಳಿಗೆ ಬೇರೆ ಬೇರೆ ಬೆಲೆ ನಿಗದಿಪಡಿಸಲಾಗಿದೆ. ಹುಟ್ಟುಹಬ್ಬ, ಮದುವೆ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಿಗೆ 1500-1800 ಸಾವಿರಕ್ಕೆ ಈ ರೋಬೋಟ್ ಬಾಡಿಗೆಗೆ ಸಿಗಲಿದೆ. ಇದು ಡಿಜೆ, ಫೋಟೋಗ್ರಾಫರ್ ಜೊತೆ ಟ್ವಿಟ್ ಮಾಡುವ ಕೆಲಸ ಮಾಡುತ್ತದೆಯಂತೆ.

ಅನೇಕ ಭಾಷೆಗಳನ್ನು ಈ ರೋಬೋಟ್ ಅರ್ಥ ಮಾಡಿಕೊಳ್ಳುತ್ತದೆಯಂತೆ. ಐದು ಅಡಿ ಎತ್ತರವಿರುವ ಈ ರೋಬೋಟ್ ಜನರಿಗೆ ಇಷ್ಟವಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...