alex Certify
ಕನ್ನಡ ದುನಿಯಾ       Mobile App
       

Kannada Duniya

ದೂರು ನೀಡಲು ಹೋಗುತ್ತಿದ್ದಾಗಲೇ ಕಣ್ಣಿಗೆ ಬಿದ್ದ ಕಳ್ಳ

robbery 2345ರಾತ್ರಿ ವೇಳೆ ಅಪರಿಚಿತರಿಂದ ಸುಲಿಗೆಗೊಳಗಾಗಿ ಹಣ ಹಾಗೂ ಆಭರಣ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ಬೆಳಿಗ್ಗೆ ದೂರು ನೀಡಲೆಂದು ಪೊಲೀಸ್ ಠಾಣೆಗೆ ತೆರಳುತ್ತಿದ್ದ ವೇಳೆ ಕಟ್ಟೆಯೊಂದರ ಮೇಲೆ ಕುಳಿತಿದ್ದ ವ್ಯಕ್ತಿಯೇ ರಾತ್ರಿ ಇತರೆ ಇಬ್ಬರ ಜೊತೆ ತಮ್ಮನ್ನು ಸುಲಿಗೆ ಮಾಡಿದವನೆಂದು ಗುರುತಿಸಿದ್ದು, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ವೇಳೆ ಆತನನ್ನು ಬಂಧಿಸಿ ದೋಚಿದ್ದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರಿನ ರಾಜು ಎಂಬವರು ರೈಲಿನಲ್ಲಿ ಮಂಗಳವಾರ ರಾತ್ರಿ 12 ಗಂಟೆಗೆ ಭದ್ರಾವತಿಗೆ ಬಂದಿದ್ದರು. ರೈಲು ನಿಲ್ದಾಣದಿಂದ ಮಾವಿನಕೆರೆ ಕಾಲೋನಿಯಲ್ಲಿರುವ ತಮ್ಮ ಸಂಬಂಧಿ ತಮ್ಮೇಗೌಡರ ಮನೆಗೆ ಆಟೋದಲ್ಲಿ ಹೋಗುತ್ತಿದ್ದ ವೇಳೆ ಆಟೋದಲ್ಲಿದ್ದ ಇಬ್ಬರು ಹಾಗೂ ಮತ್ತೊಬ್ಬ ಅವರನ್ನು ಬೆದರಿಸಿ 4,800 ರೂ. ನಗದು ಹಾಗೂ ಚಿನ್ನದ ಉಂಗುರ ಕಸಿದುಕೊಂಡಿದ್ದರು.

ಬುಧವಾರ ಬೆಳಿಗ್ಗೆ ಈ ಕುರಿತು ದೂರು ನೀಡಲೆಂದು ರಾಜು ಅವರು, ಪೊಲೀಸ್ ಠಾಣೆಗೆ ಹೋಗುತ್ತಿದ್ದ ವೇಳೆ ಜಯಶ್ರೀ ವೃತ್ತದ ಬಳಿ ಕಟ್ಟೆಯ ಮೇಲೆ ವ್ಯಕ್ತಿಯೊಬ್ಬ ಕುಳಿತಿರುವುದನ್ನು ನೋಡಿದ್ದಾರೆ. ರಾತ್ರಿ ತಮ್ಮನ್ನು ಸುಲಿಗೆ ಮಾಡಿದ ತಂಡದಲ್ಲಿ ಈತನೂ ಇದ್ದದ್ದನ್ನು ಗುರುತಿಸಿದ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ ಆತ, ರಾಜು ಅವರಿಂದ ಕಿತ್ತುಕೊಂಡ ವಸ್ತುಗಳನ್ನಿಟ್ಟಿರುವ ಸ್ಥಳದ ಮಾಹಿತಿ ನೀಡಿದ್ದಾನೆ. ಅವುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಪರಾರಿಯಾಗಿರುವ ಇನ್ನಿಬ್ಬರ ಪತ್ತೆಗಾಗಿ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...