alex Certify
ಕನ್ನಡ ದುನಿಯಾ       Mobile App
       

Kannada Duniya

ಬೀದಿ ಕಾಮಣ್ಣರಿಗೆ ಬಿತ್ತು ಭರ್ತಿ ಗೂಸಾ

(Adam Milner/CU Independent Illustration)

ಈಗಂತೂ ಒಂಟಿಯಾಗಿ ಹೆಣ್ಣುಮಕ್ಕಳು ತಿರುಗಾಡುವಂತಿಲ್ಲ. ಎಲ್ಲೆಂದರಲ್ಲಿ ಕಾಣಸಿಗುವ ಬೀದಿಕಾಮಣ್ಣರು ಪೀಡಿಸುತ್ತಾರೆ. ಹೀಗೆ ಪೀಡಿಸುವ ಬೀದಿ ಕಾಮಣ್ಣರಿಗೆ ಹೆಣ್ಣುಮಕ್ಕಳೇ ಕೆಲವೊಮ್ಮೆ ತಕ್ಕ ಪಾಠ ಕಲಿಸಿದ ಉದಾಹರಣೆಗಳಿವೆ. ಕೆಲವೊಮ್ಮೆ ಸಾರ್ವಜನಿಕರೂ ಧರ್ಮದೇಟು ನೀಡಿದ ಪ್ರಕರಣಗಳೂ ನಡೆದಿವೆ.

ಹುಬ್ಬಳ್ಳಿಯಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬಳನ್ನು ಪೀಡಿಸುತ್ತಿದ್ದ ಬೀದಿ ಕಾಮಣ್ಣರಿಗೆ ಸಾರ್ವಜನಿಕರೇ ಸರಿಯಾದ ಪಾಠ ಕಲಿಸಿದ್ದಾರೆ. ಹುಬ್ಬಳ್ಳಿಯ ಬಂಕಾಪುರ ಚೌಕ್ ಬಳಿ ಶಾಲೆಗೆ ಹೋಗಿ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಅಲ್ಲೇ ಬೀಡುಬಿಟ್ಟಿದ್ದ ಯುವಕರ ಗುಂಪು ರೇಗಿಸಿ ಕಾಟ ಕೊಡುತ್ತಿತ್ತು. ಮೊದಲಿಗೆ ವಿದ್ಯಾರ್ಥಿನಿ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾಳೆ. ಆದರೆ, ಅವರ ಕಾಟ ಮಿತಿ ಮೀರಿದೆ. ದಿನಾಲು ಈಕೆಯನ್ನು ಚುಡಾಯಿಸುತ್ತಿದ್ದ ಪುಂಡರು, ಮನೆಯಲ್ಲಿ ಹೇಳಿದರೆ, ಹೊತ್ತೊಯ್ದು ಅತ್ಯಾಚಾರ ಎಸಗುವುದಾಗಿ ಬೆದರಿಕೆ ಹಾಕಿದ್ದರು.

ದಿನಾ ಶಾಲೆಗೆ ಹೋಗಿ ಬರುವಾಗ ಪುಂಡರು ಕೊಡುತ್ತಿದ್ದ ಕಾಟ ಹೆಚ್ಚಾದ ಕಾರಣ ವಿದ್ಯಾರ್ಥಿನಿ ಮನೆಯಲ್ಲಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಪೋಷಕರು ಸ್ಥಳೀಯರ ನೆರವಿನಿಂದ ಪುಂಡರನ್ನು ಥಳಿಸಿದ್ದು, ಅವರೆಲ್ಲಾ ಪರಾರಿಯಾಗಿದ್ದಾರೆ. ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...