alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿ ಮಾನವೀಯತೆ ಮೆರೆದ ಸಚಿವ ಜಮೀರ್ ಅಹ್ಮದ್

ಗದಗ: ಟಂಟಂ ಮತ್ತು ಕ್ರೂಷರ್ ವಾಹನಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ವೇಳೆ ಅಪಘಾತ ನಡೆದ ಮಾರ್ಗವಾಗಿ ತೆರಳುತ್ತಿದ್ದ ಸಚಿವ ಜಮೀರ್ ​ಅಹ್ಮದ್ ಖಾನ್ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

ಗದಗ-ಹುಬ್ಬಳ್ಳಿ ಹೆದ್ದಾರಿಯಲ್ಲಿ ಹುಲಕೋಟಿ ಬಳಿ ಈ ಅಪಘಾತ ಸಂಭವಿಸಿತ್ತು. ಗದಗದಿಂದ ಹುಲಕೋಟಿಗೆ ತೆರಳುತ್ತಿದ್ದ ಟಂಟಂಗೆ ಹುಲಕೋಟಿಯಿಂದ ಗದಗಗೆ ಬರುತ್ತಿದ್ದ ಕ್ರೂಷರ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಹುಲಕೋಟಿ ಗ್ರಾಮದ ಬಸವರಾಜ ಶಿವಪ್ಪ ನವಲಗುಂದ (47) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟಂಟಂ ಚಾಲಕ ಮಹಾಂತೇಶ ಚವಡಿ, ಸಯ್ಯದ್ ​ಉಸ್ಮಾನ್ ಕೊಪ್ಪಳ, ರವಿ ಚೌಧರಿ, ಬಾಬಾಜಾನ್ ಧಾರವಾಡ, ಸುನಿತಾ ಸಣ್ಣತಮ್ಮಣ್ಣವರ, ದೇವಕ್ಕ ಶೇಖಪ್ಪ ಹೂಗಾರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಸಂಭವಿಸಿದ ವೇಳೆ ಅದೇ ಮಾರ್ಗವಾಗಿ ಬರುತ್ತಿದ್ದ ಸಚಿವ ಜಮೀರ್ ಅಹ್ಮದ್, ಅಪಘಾತವಾಗಿ ಗಾಯಾಳುಗಳು ನರಳುತ್ತಿರುವುದನ್ನು ಕಂಡು ತಮ್ಮ ಕಾರನ್ನು ನಿಲ್ಲಿಸಿ, ತಕ್ಷಣ ಇಳಿದು ಸ್ವತಃ ಅವರೇ ಗಾಯಾಳುಗಳನ್ನು ಎತ್ತಿಕೊಂಡು ಆಂಬುಲೆನ್ಸ್​ಗೆ ಹಾಕಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸಚಿವರ ಮಾನವೀಯತೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...