alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷಣಾರ್ಧದಲ್ಲಿ ಕರಗಿತ್ತು ಹಬ್ಬದ ಸಂಭ್ರಮ

smg river

ಶಿವಮೊಗ್ಗ: ಇಡೀ ಊರಿಗೆ ಊರೇ ಗೌರಿ, ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿತ್ತು. ಊರಿನ ಜನರೆಲ್ಲಾ ಸೇರಿ ಅದ್ಧೂರಿ ಮೆರವಣಿಗೆ ನಡೆಸಿ, ಗಣಪತಿಯನ್ನು ಬಿಡಲು ತುಂಗಾ ಭದ್ರಾ ನದಿಗೆ ತೆರಳಿದ್ದರು.

ಆದರೆ, ನದಿಯಲ್ಲೇ ಕಾದು ಕುಳಿತಿದ್ದ ಜವರಾಯ, ಗಣಪತಿ ವಿಸರ್ಜನೆಗೆ ಬಂದವರನ್ನು ಕರೆದೊಯ್ದಿದ್ದಾನೆ. ಹಬ್ಬದ ಸಂಭ್ರಮ ಮರೆಯಾಗಿ ಊರಿನಲ್ಲಿ ಸೂತಕದ ಛಾಯೆ ಆವರಿಸಿದೆ. ಶಿವಮೊಗ್ಗ ತಾಲ್ಲೂಕಿನ ಹಾಡೋನಹಳ್ಳಿಯಲ್ಲಿ ಗಣಪತಿ ವಿಸರ್ಜನೆಗೆ ಹೋಗಿ ನೀರು ಪಾಲಾಗಿದ್ದವರಲ್ಲಿ 7 ಮಂದಿಯ ಶವ ಪತ್ತೆಯಾಗಿದೆ. ಮಂಜಪ್ಪ, ವೀರಭದ್ರ, ಶಿವಕುಮಾರ್, ಗಣೇಶ್, ಜೀವನ್ ಸೇರಿದಂತೆ 7 ಮಂದಿಯ ಶವ ಪತ್ತೆಯಾಗಿವೆ ಎನ್ನಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ, ನುರಿತ ಈಜುಗಾರರ ನೆರವಿನಿಂದ ಶವಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದ್ದು, ಕತ್ತಲೆ ಆವರಿಸಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ಹಾಡೋನಹಳ್ಳಿಯಲ್ಲಿ ಗಣಪತಿ ವಿಸರ್ಜನೆಗೆ ಹೋದವರು ನದಿಯಲ್ಲಿ ಮುಳುಗಿರುವ ಸುದ್ದಿ ತಿಳಿಯುತ್ತಲೇ ಅಪಾರ ಸಂಖ್ಯೆಯ ಜನ ನದಿಯ ಬಳಿ ನೆರೆದಿದ್ದರು. ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿನವ್ ಖರೆ ಸ್ಥಳಕ್ಕೆ ಭೇಟಿ ನೀಡಿದ್ದರು. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...