alex Certify
ಕನ್ನಡ ದುನಿಯಾ       Mobile App
       

Kannada Duniya

ಜಮೀರ್ ವಿರುದ್ದ ಏಕವಚನದಲ್ಲಿ ರೇವಣ್ಣ ವಾಗ್ದಾಳಿ

ಜೆಡಿಎಸ್ ಭಿನ್ನಮತೀಯ ಶಾಸಕ ಜಮೀರ್ ಅಹ್ಮದ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುವುದು ಖಚಿತವಾಗಿದ್ದು, ಈಗಾಗಲೇ ಇದಕ್ಕೆ ಪೂರಕ ಸಿದ್ದತೆಗಳು ನಡೆದಿವೆ. ಈ ಮಧ್ಯೆ ಜೆಡಿಎಸ್ ಮುಖಂಡ ಹೆಚ್.ಡಿ. ರೇವಣ್ಣ, ಜಮೀರ್ ಅಹ್ಮದ್ ವಿರುದ್ದ ಏಕವಚನದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ನನ್ನು ದೇವೇಗೌಡರಿಗೆ ಪರಿಚಯಿಸಿದ್ದೇ ನಾನು. ಚಾಮರಾಜಪೇಟೆಯಲ್ಲಿ ಡಬ್ಬ ಹೊತ್ತುಕೊಂಡಿದ್ದ ಜಮೀರ್ ಅಹ್ಮದ್, ಆರ್.ವಿ. ದೇವರಾಜ್ ಗೂ ಟೋಪಿ ಹಾಕಿದ್ದಾನೆ ಎಂದರು.

ಆತನನ್ನು ನಾನು ಲೆಕ್ಕಕ್ಕೇ ಇಟ್ಟಿಲ್ಲವೆಂದ ಹೆಚ್.ಡಿ. ರೇವಣ್ಣ, ಕಾಂಗ್ರೆಸ್ ನಲ್ಲಿರುವ ಮುಸ್ಲಿಂ ಮುಖಂಡರೆಲ್ಲ ದೇವೇಗೌಡರ ಪ್ರಾಡಕ್ಟ್ ಗಳೇ. ಕಾಂಗ್ರೆಸ್ ನಲ್ಲಿ ಮುಸ್ಲಿಂ ಮುಖಂಡರಿಲ್ಲದ ಕಾರಣ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಜಮೀರ್ ಅಹ್ಮದ್ ನನ್ನು ಹೊಗಳುತ್ತಿದ್ದಾರೆಂದು ವ್ಯಂಗ್ಯವಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...