alex Certify
ಕನ್ನಡ ದುನಿಯಾ       Mobile App
       

Kannada Duniya

ರವಿ ಬೆಳಗೆರೆ 2 ನೇ ಪತ್ನಿ ಮನೆಯಿಂದ ನಾಪತ್ತೆ…?

ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಬಂಧಿತರಾಗಿರುವ, ರವಿ ಬೆಳಗೆರೆ ಅವರ 2 ನೇ ಪತ್ನಿ ಯಶೋಮತಿ ತಮ್ಮ ನಿವಾಸದಿಂದ ನಾಪತ್ತೆಯಾಗಿದ್ದಾರೆ.

ಸುನಿಲ್ ಹೆಗ್ಗರವಳ್ಳಿಯೊಂದಿಗೆ ಯಶೋಮತಿ ಅಕ್ರಮ ಸಂಬಂಧ ಹೊಂದಿದ್ದರೆಂಬ ಆರೋಪವಿದ್ದು, ಸಿ.ಸಿ.ಬಿ. ಪೊಲೀಸರು ವಿಚಾರಣೆ ನಡೆಸಲಿರುವ ಸಾಧ್ಯತೆ ಹಿನ್ನಲೆಯಲ್ಲಿ ಅವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಲೇಔಟ್ ನಿವಾಸದಿಂದ ಯಶೋಮತಿ ನಾಪತ್ತೆಯಾಗಿದ್ದು, ಹಿಂದೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಕೆಲವು ಫೋಟೋಗಳನ್ನು ಡಿಲಿಟ್ ಮಾಡಿದ್ದಾರೆ.

ಇನ್ನು ಅಕ್ರಮ ಸಂಬಂಧದ ಕಾರಣಕ್ಕೆ ತಮ್ಮ ಹತ್ಯೆಗೆ ರವಿ ಬೆಳಗೆರೆ ಸುಪಾರಿ ಕೊಟ್ಟಿರಬಹುದೇ ಎಂಬ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಸುನಿಲ್ ಹೆಗ್ಗರವಳ್ಳಿ, ಯಶೋಮತಿ ಅವರೊಂದಿಗೆ ಫೋನ್ ನಲ್ಲಿ ಮಾತನಾಡುತ್ತಿದ್ದೆ. ಅವರು ಸಂಸ್ಥೆಯ ಉಸ್ತುವಾರಿ ವಹಿಸಿಕೊಂಡಿದ್ದ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡಿದ್ದೇನೆ ಹೊರತು ಅವರೊಂದಿಗೆ ಯಾವ ಸಂಬಂಧವಿಲ್ಲ. 14 ವರ್ಷ ಬೆಳಗೆರೆ ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರ ಕುಟುಂಬದವರೊಂದಿಗೆ ನಾನು ಕಳೆದ 15 ದಿನಗಳ ಹಿಂದಿನವರೆಗೂ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...