alex Certify
ಕನ್ನಡ ದುನಿಯಾ       Mobile App
       

Kannada Duniya

2 ನೇ ಪತ್ನಿ ಮನೆ ಪ್ರವೇಶಕ್ಕೆ ರವಿ ಬೆಳಗೆರೆ ನಿರಾಕರಣೆ

ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಅವರ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಬಂಧಿತರಾಗಿರುವ ರವಿ ಬೆಳಗೆರೆ ಸಿ.ಸಿ.ಬಿ. ಪೊಲೀಸರ ವಶದಲ್ಲಿದ್ದಾರೆ.

ರವಿ ಬೆಳಗೆರೆ ಅವರ ವಿಚಾರಣೆ ನಡೆಸಿರುವ ಪೊಲೀಸರು ಅವರ 2 ನೇ ಪತ್ನಿ ಮನೆಗೆ ಕರೆದೊಯ್ದು ಪರಿಶೀಲನೆ ನಡೆಸಿದ್ದಾರೆ.

ಆರ್.ಆರ್. ನಗರದ ಪಟ್ಟಣಗೆರೆ ಲೇಔಟ್ ನಲ್ಲಿರುವ ರವಿ ಬೆಳಗೆರೆ ಅವರ 2 ನೇ ಪತ್ನಿ ಯಶೋಮತಿ ಅವರ ನಿವಾಸಕ್ಕೆ ಪೊಲೀಸರು ಕರೆತಂದಿದ್ದಾರೆ. ಈ ವೇಳೆ ಮನೆಯೊಳಗೆ ಪ್ರವೇಶಿಸಲು ಬೆಳಗೆರೆ ನಿರಾಕರಿಸಿದ್ದಾರೆ.

ವಾಹನದಿಂದ ಇಳಿಯದೇ ಅವರು ಹಠ ಮಾಡಿದ್ದು, ನಂತರ ಮನವೊಲಿಸಿ ಅವರನ್ನು ಪೊಲೀಸ್ ಅಧಿಕಾರಿಗಳು ಒಳಗೆ ಕರೆದುಕೊಂಡು ಹೋಗಿದ್ದಾರೆ. ರವಿ ಬೆಳಗೆರೆ ಅವರ ಸಮ್ಮುಖದಲ್ಲಿ ಮನೆಯಲ್ಲಿ ತಪಾಸಣೆ ನಡೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...