alex Certify
ಕನ್ನಡ ದುನಿಯಾ       Mobile App
       

Kannada Duniya

ಅರೆನಗ್ನರಾಗಿ ಪಾರ್ಟಿ ನಡೆಸುತ್ತಿದ್ದ ಟೆಕ್ಕಿಗಳು ‘ಮಾವ’ನ ಮನೆಗೆ !

b1ab3828-cd38-429f-8f6d-a357692f0e35

ಪಾರ್ಟಿ ಹೆಸರಿನಲ್ಲಿ ಅರೆನಗ್ನವಾಗಿ ಕುಡಿದು ಕುಪ್ಪಳಿಸುತ್ತಿದ್ದ ಟೆಕ್ಕಿಗಳನ್ನು ವಶಕ್ಕೆ ಪಡೆದಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರಿನ ಆರ್.ಜಿ. ರೆಸಾರ್ಟ್‍ನಲ್ಲಿ ನಡೆದಿದೆ.

ಭಾನುವಾರ ರಾತ್ರಿ ಇಲ್ಲಿನ ಆರ್.ಜಿ. ರೆಸಾರ್ಟ್‍ ನಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಹತ್ತು ಮಂದಿ ಯುವತಿಯರೂ ಸೇರಿದಂತೆ ಹಲವು ಟೆಕ್ಕಿಗಳು ಅರೆನಗ್ನರಾಗಿ ಕುಡಿದು ಕುಣಿಯುತ್ತಿದ್ದರು. ಈ ಕುರಿತು ಅಧಿಕೃತ ಮಾಹಿತಿ ಪಡೆದ ಮಾಲೂರು ಪೊಲೀಸರ ವಿಶೇಷ ತಂಡ ಕಾರ್ಯಚರಣೆ ನಡೆಸಿ ಪಾರ್ಟಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ಕುಣಿಯುತ್ತಿದ್ದ ಹೈದರಾಬಾದ್ ಮೂಲದ 10 ಜನ ಯುವತಿಯರೂ ಸೇರಿದಂತೆ 38 ಮಂದಿ ಟೆಕ್ಕಿಗಳನ್ನು ಬಂಧಿಸಿದ್ದಾರೆ.

ಅಲ್ಲದೇ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪಾರ್ಟಿಯ ಆಯೋಜಕರನ್ನು ವಶಕ್ಕೆ ಪಡೆದಿದ್ದು, ರೆಸಾರ್ಟ್ ನ್ನೂ ಸಹ ಸೀಜ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...