alex Certify
ಕನ್ನಡ ದುನಿಯಾ       Mobile App
       

Kannada Duniya

ಇವರನ್ನು ನಗಿಸಿದರೆ ಸಿಗುತ್ತೆ 2 ಲಕ್ಷ ರೂ.

rane

ಹಾವೇರಿ: ಹೋಳಿ ಹಬ್ಬದ ಪ್ರಯುಕ್ತ ರತಿ, ಮನ್ಮಥರನನ್ನು ನಗಿಸಿದರೆ ನಿಮಗೆ 2 ಲಕ್ಷ ರೂ. ಬಹುಮಾನವಾಗಿ ಸಿಗುತ್ತದೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ದೊಡ್ಡಪೇಟೆಯ ರಾಮಲಿಂಗೇಶ್ವರ ದೇವಾಲಯದಲ್ಲಿ ರತಿ, ಮನ್ಮಥ ವೇಷಧಾರಿಗಳಾಗಿ ಪುರುಷರು ಕೂರುತ್ತಾರೆ. ಇವರನ್ನು ಮುಟ್ಟದೆ ನಗಿಸುವವರಿಗೆ ಬಹುಮಾನ ನೀಡಲಾಗುತ್ತದೆ.

ಕುಮಾರ್ ಹಡಪದ(30), ಗದಿಗೆಪ್ಪ ರೊಡ್ಡನವರ(40) ಕಳೆದ 18 ವರ್ಷಗಳಿಂದ ರತಿ, ಮನ್ಮಥರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇಲ್ಲಿ 59 ವರ್ಷಗಳಿಂದ ಯುವಕರೇ ರತಿ, ಮನ್ಮಥರ ವೇಷಧಾರಿಗಳಾಗಿ ಕಾಣಿಸಿಕೊಳ್ಳುತ್ತಿದ್ದು, ಇದುವರೆಗೂ ಯಾರೂ ಅವರನ್ನು ನಗಿಸಲು ಸಾಧ್ಯವಾಗಿಲ್ಲ. ಈ ಬಾರಿ ಬಹುಮಾನದ ಮೊತ್ತವನ್ನು 2 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...