alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವೀಟ್ಸ್ ತಿನ್ನುವ ಮೊದಲು ಇದನ್ನೊಮ್ಮೆ ಓದಿ

rat

ಬೆಂಗಳೂರು: ಸ್ವೀಟ್ಸ್ ಎಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಎಲ್ಲರಿಗೂ ಸಿಹಿತಿನಿಸು ಎಂದರೆ ಅಚ್ಚುಮೆಚ್ಚು. ಇಂತಹ ಸ್ವೀಟ್ ಮಾರಾಟದ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಕಂಡು ಬಂದ ಚಿತ್ರಣ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬೆಂಗಳೂರು ಬನ್ನೇರುಘಟ್ಟ ರಸ್ತೆಯಲ್ಲಿರುವ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಸಿಹಿ ತಿನಿಸುಗಳ ಮೇಲೆ ಹಗಲಿನಲ್ಲೇ ಬೃಹತ್ ಗಾತ್ರದ ಇಲಿಯೊಂದು ಓಡಾಡುತ್ತಿರುವ ದೃಶ್ಯವನ್ನು ಗ್ರಾಹಕರೊಬ್ಬರು ಸೆರೆ ಹಿಡಿದಿದ್ದಾರೆ. ಶೋಕೇಸ್ ನಲ್ಲಿ ಇಡಲಾಗಿದ್ದ ಸ್ವೀಟ್ ಗಳ ಮೇಲೆ ಕಾಣಿಸಿಕೊಳ್ಳುವ ಇಲಿ, ಅಲ್ಲಿದ್ದ ಸ್ವೀಟ್ ಗಳ ರುಚಿಯನ್ನು ನೋಡಿ ಅವುಗಳ ಮೇಲೆಲ್ಲಾ ಓಡಾಡಿದೆ. ಇದನ್ನು ಕಂಡ ಗ್ರಾಹಕರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ರುಚಿ, ಶುಚಿ ಎಂದೇ ಹೇಳುವ ಪ್ರತಿಷ್ಠಿತ ಹೋಟೆಲ್ ನಲ್ಲಿ ಸ್ವೀಟ್ ಮೇಲೆ ಇಲಿ ಓಡಾಡುತ್ತಿರುವ ಈ ದೃಶ್ಯವನ್ನು ಸೆರೆ ಹಿಡಿದ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...