alex Certify
ಕನ್ನಡ ದುನಿಯಾ       Mobile App
       

Kannada Duniya

ಇಲಿಯಿಂದ ಪರಿತಪಿಸುವಂತಾಯ್ತು ಭದ್ರಾವತಿ ಜನ

bdvt-pwr

ಶಿವಮೊಗ್ಗ: ಇಲಿಯಿಂದಾಗಿ ಭದ್ರಾವತಿ ಅರ್ಧ ಭಾಗದ ಜನ ವಿದ್ಯುತ್ ಇಲ್ಲದೇ ಪರಿತಪಿಸುವಂತಾದ ಘಟನೆ ನಡೆದಿದೆ.

ಭದ್ರಾವತಿ ನ್ಯೂಟೌನ್ ಜೆ.ಪಿ.ಎಸ್. ಕಾಲೋನಿಯಲ್ಲಿರುವ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಇಲಿಯೊಂದು ನುಗ್ಗಿದೆ. ಬ್ರೇಕರ್ ಗೆ ಇಲಿ ನುಗ್ಗಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಆಗಿ, ಬೆಂಕಿ ತಗುಲಿದೆ.

ವಿದ್ಯುತ್ ಬ್ರೇಕರ್ ಹಾಗೂ ಸರಬರಾಜು ವ್ಯವಸ್ಥೆಗೆ ಹಾನಿಯಾಗಿದೆ. ಇದರಿಂದಾಗಿ ಇಡೀ ದಿನ ಭದ್ರಾವತಿ ನ್ಯೂಟೌನ್ ಮಾತ್ರವಲ್ಲದೇ, ಅನೇಕ ಗ್ರಾಮಾಂತರ ಪ್ರದೇಶಗಳಲ್ಲಿಯೂ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.

ಮೆಸ್ಕಾಂ ಸಿಬ್ಬಂದಿ ಮತ್ತು ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿ ದುರಸ್ಥಿಪಡಿಸಿದ್ದು, ನಂತರ ವಿದ್ಯುತ್ ಸರಬರಾಜು ವ್ಯವಸ್ಥೆ ಸರಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...