alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯೂಟಿಷಿಯನ್ ಮೇಲೆ ಗ್ಯಾಂಗ್ ರೇಪ್

gang rape 45

ಬೆಂಗಳೂರು: ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ತಡೆಗೆ ಏನೆಲ್ಲಾ ಕ್ರಮಕೈಗೊಂಡರೂ ನಿಯಂತ್ರಣ ಸಾಧ್ಯವಾಗಿಲ್ಲ. ಕಾಮುಕರು ಹಾಡಹಗಲೇ ಬ್ಯೂಟಿಷಿಯನ್ ಒಬ್ಬರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೋಲ್ಕತಾ ಮೂಲದ ಸುಮಾರು 23 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಮಂಗಲ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಯುವತಿ ಬ್ಯೂಟಿಷಿಯನ್ ವೃತ್ತಿ ಮಾಡುತ್ತಿದ್ದು, ಫೆಬ್ರವರಿ 2ರಂದು ತಮ್ಮ ಸ್ನೇಹಿತೆಯನ್ನು ಭೇಟಿ ಮಾಡಲು ಅಶೋಕನಗರದಿಂದ ಕೋರಮಂಗಲಕ್ಕೆ ಹೊರಟಿದ್ದಾರೆ. ಕೋರಮಂಗಲದ ಕರ್ನಾಟಕ ಬ್ಯಾಂಕ್ ಸಮೀಪ ಅವರನ್ನು ನಾಲ್ವರು ದುಷ್ಕರ್ಮಿಗಳು ಕಾರ್ ನಲ್ಲಿ ಅಪಹರಿಸಿದ್ದಾರೆ.

ನಂತರ ಗೋಡೌನ್ ಒಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಅಲ್ಲಿಂದ ಹೊಸೂರು ರಸ್ತೆಯ ಆಡುಗೋಡಿ ಹತ್ತಿರ ಯುವತಿಯನ್ನು ಇಳಿಸಿ ಪರಾರಿಯಾಗಿದ್ದಾರೆ. ಆಕೆಯ ಬಳಿ ಇದ್ದ ಮೊಬೈಲ್, 15,000 ರೂ. ನಗದು ದೋಚಿದ್ದಾರೆ. ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...