alex Certify
ಕನ್ನಡ ದುನಿಯಾ       Mobile App
       

Kannada Duniya

ಬಹುಮಾನದೊಂದಿಗೆ ಪ್ರವಾಸದ ಅವಕಾಶ ಗಿಟ್ಟಿಸಿಕೊಂಡಿದ್ದ ಪೇದೆ ಅರೆಸ್ಟ್

ಕುಖ್ಯಾತ ಕಳ್ಳನನ್ನು ಬೆನ್ನತ್ತಿ ಹಿಡಿದು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಶಹಬ್ಬಾಸ್ ಗಿರಿ ಜೊತೆಗೆ ಪಲ್ಸರ್ ಬೈಕ್ ಹಾಗೂ ಪ್ರವಾಸಕ್ಕೆ ಹೋಗಲು ವೇತನ ಸಹಿತ ರಜೆ ಅವಕಾಶ ಗಿಟ್ಟಿಸಿಕೊಂಡಿದ್ದ ಪೊಲೀಸ್ ಪೇದೆ, ಇದೀಗ ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾನೆ.

ಜ್ಞಾನಭಾರತಿ ಪೊಲೀಸ್ ಠಾಣೆಯ ಮುಖ್ಯಪೇದೆ ಚಂದ್ರಕುಮಾರ್ ಇದೀಗ ಮಹಿಳಾ ಹೋಂ ಗಾರ್ಡ್ ಒಬ್ಬರ ಮೇಲೆ ಅವರ ಮನೆಯಲ್ಲಿಯೇ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆರೋಪಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಠಾಣೆ ಪೊಲೀಸರು ಚಂದ್ರಕುಮಾರನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹೋಂ ಗಾರ್ಡ್ ಗೆ ಪರಿಚಿತನಾಗಿದ್ದ ಚಂದ್ರಕುಮಾರ್ ಈ ಹಿಂದೆ ಆಕೆಯನ್ನು ಬೈಕ್ ನಲ್ಲಿ ಡ್ರಾಪ್ ಮಾಡಿದ್ದು, ಇದೇ ಸಲುಗೆಯಲ್ಲಿ ನವೆಂಬರ್ 16ರಂದು ಆಕೆಯ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ. ಈ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಇನ್ಸ್ಪೆಕ್ಟರ್ ಬುದ್ಧಿವಾದ ಹೇಳಿ ಕಳಿಸಿದ್ದರೆನ್ನಲಾಗಿದೆ. ಅಂದು ರಾತ್ರಿ, ಮಹಿಳಾ ಹೋಂ ಗಾರ್ಡ್ ಮನೆಗೆ ನುಗ್ಗಿದ ಚಂದ್ರಕುಮಾರ್ ಅತ್ಯಾಚಾರವೆಸಗಿದ್ದಾನೆಂದು ದೂರು ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...