alex Certify
ಕನ್ನಡ ದುನಿಯಾ       Mobile App
       

Kannada Duniya

ಕುರಿ ಕಾಯುತ್ತಿದ್ದ ಬಾಲಕಿ ಮೇಲೆರೆಗಿದ ಕಿರಾತಕರು

rape murder

ಯಾದಗಿರಿ: ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ಇತ್ತೀಚೆಗೆ ಹೆಚ್ಚಾಗಿವೆ. ಅದರಲ್ಲಿಯೂ ಒಂಟಿಯಾಗಿ ಹೆಣ್ಣುಮಕ್ಕಳು ಓಡಾಡುವುದೇ ಕಷ್ಟವಾಗಿದೆ. ಹೀಗೆ ಒಂಟಿಯಾಗಿದ್ದ ಬಾಲಕಿಯೊಬ್ಬಳ ಮೇಲೆ ಕಟುಕರು ಎರಗಿದ ಘಟನೆ ವರದಿಯಾಗಿದೆ.

ಬೆಟ್ಟದ ಮೇಲೆ ಕುರಿ ಕಾಯುತ್ತಿದ್ದ ಬಾಲಕಿಯೊಬ್ಬಳ ಮೇಲೆ, ಅತ್ಯಾಚಾರ ಎಸಗಿದ ಕಟುಕರು, ಆಕೆಯನ್ನು ಹತ್ಯೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಸುರಪುರ ತಾಲ್ಲೂಕಿನ ನಾರಾಯಣಪುರ ಪೊಲೀಸ್ ಠಾಣೆ ವ್ಯಾಫ್ತಿಯ ರಾಯನಗೊಳ್ಳ ಗ್ರಾಮದ ಸಮೀಪ ಈ ದುರ್ಘಟನೆ ಸಂಭವಿಸಿದೆ. ಗ್ರಾಮಕ್ಕೆ ಸಮೀಪದ ಬೆಟ್ಟದ ಮೇಲೆ ಬಾಲಕಿ ಕುರಿ ಕಾಯುತ್ತಿದ್ದ ಸಂದರ್ಭದಲ್ಲಿ ಕಿರಾತಕರು, ಅತ್ಯಾಚಾರ ಎಸಗಿ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಸ್ಥಳಕ್ಕೆ ನಾರಾಯಣಪುರ ಠಾಣೆ ಪೊಲೀಸರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಬಾಳಿ ಬದುಕಬೇಕಾದ ಬಾಲಕಿ ಎಳೆಯ ವಯಸ್ಸಿನಲ್ಲೇ ಕಟುಕರ ಕೈಗೆ ಸಿಲುಕಿ ಇಹಲೋಕ ತ್ಯಜಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...