alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ಯುವರಾಜನ ಜತೆ ರಮ್ಯಾ: ಪಕ್ಷ ‘ಬಲವರ್ಧನೆ’ಗೆ ಪಾದಯಾತ್ರೆ

ramya-new-Q71Iq

ಕಾಂಗ್ರೆಸ್ ಹೈಕಮಾಂಡ್ ‘ಆಪ್ತ’ ವಲಯದಲ್ಲಿ ಗುರುತಿಸಿಕೊಂಡಿರುವ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರ ಜತೆ ಕಾಣಿಸಿಕೊಳ್ಳುವ ಮೂಲಕ ಕುತೂಹಲಕ್ಕೆ ಕಾರಣರಾಗಿದ್ದಾರೆ.

ಹೌದು. ಹಲವು ದಿನಗಳ ಹಿಂದಷ್ಟೇ ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಳ್ಳುವ ಸೂಚನೆ ನೀಡಿದ್ದ ರಮ್ಯಾ ಎಂ ಎಲ್ ಸಿ ಚುನಾವಣೆಯಲ್ಲಿ ಕಣಕ್ಕಿಳಿಯುವ ಉತ್ಸಾಹ ಪ್ರದರ್ಶಿಸಿದ್ದರು. ಆದರೆ ಅಂತಿಮವಾಗಿ ತಾವು ಸ್ಪರ್ಧಿಸುವುದಿಲ್ಲ ಎಂದಿದ್ದ ರಮ್ಯಾ, ತದನಂತರ ಮಂಡ್ಯದಲ್ಲಿಯೇ ತಮ್ಮ ನೂತನ ಮನೆಯನ್ನು ಪ್ರವೇಶಿಸಿ ಮಂಡ್ಯದ ರಾಜಕೀಯದಲ್ಲಿ ಸಕ್ರಿಯರಾಗುವ ಮುನ್ಸೂಚನೆಯನ್ನು ನೀಡಿದ್ದರು.

ಇದರ ಬೆನ್ನಲ್ಲಿಯೇ ಇದೀಗ ಅಸ್ಸಾಂನಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಯಲ್ಲಿ ರಮ್ಯಾ ಪ್ರತ್ಯಕ್ಷರಾಗಿದ್ದು, ಸ್ವತಃ ರಮ್ಯಾ ತಮ್ಮ ಫೋಟೋಗಳನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ‘ಪಾದಯಾತ್ರೆ’ ಎಂದು ಹೆಡ್ ಲೈನ್ ಕೊಡುವ ಮೂಲಕ ಮತ್ತೊಮ್ಮೆ ಕುತೂಹಲಕ್ಕೆ ಕಾರಣರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...