alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮರಸ್ಯಕ್ಕೆ ಸಾಕ್ಷಿಯಾದ ಉಡುಪಿ ಕೃಷ್ಣಮಠ

img-20170625-wa0001

ಉಡುಪಿ: ಉಡುಪಿ ಶ್ರೀಕೃಷ್ಣಮಠದಲ್ಲಿ ಮುಸ್ಲಿಮರಿಗೆ ರಂಜಾನ್ ಸತ್ಕಾರ ಕೂಟ ಏರ್ಪಡಿಸಲಾಗಿತ್ತು. ಇದೇ ಮೊದಲ ಬಾರಿಗೆ ನಡೆದ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು ಖರ್ಜೂರ ಬಡಿಸಿದ್ದಾರೆ.

ರಂಜಾನ್ ಉಪವಾಸ ಮುಗಿಸಿದ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿ ಉಪಾಹಾರ ಸೇವಿಸಿದ್ದಾರೆ. ಅನ್ನಬ್ರಹ್ಮ ಮಹಡಿಯಲ್ಲಿ ಮುಸ್ಲಿಮರು ಅಂಜುಮಾನ್ ಮಸೀದಿಯ ಇಮಾಮ್ ಮೌಲಾನ ಇನಾಯತ್ ವುಲ್ಲಾ ನೇತೃತ್ವದಲ್ಲಿ ನಮಾಜ್ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ಹಿಂದೂ, ಮುಸ್ಲಿಮರು ಸೌಹಾರ್ದ, ಸಾಮರಸ್ಯದಿಂದ ಬದುಕಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಭಕ್ತಿ ಬೆಳೆಯಬೇಕಿದೆ ಎಂದು ಹೇಳಿದ್ದಾರೆ.

ಬಿ.ಜೆ.ಪಿ. ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ರಹೀಂ ಉಚ್ಚಿಲ ಮಾತನಾಡಿ, ಆದರ್ಶಪ್ರಾಯರಾದ ಶ್ರೀಗಳು ಹೇಳಿದ ಮಾತುಗಳು ಪ್ರಸ್ತುತವಾಗಿವೆ, ಶ್ರೀಕೃಷ್ಣನ ಸನ್ನಿಧಿಯಲ್ಲಿ ಉಪವಾಸ ಮುಗಿಸಿ ಉಪಾಹಾರ ಸೇವಿಸುವ ಅವಕಾಶ ದೊರೆತಿದೆ ಎಂದು ತಿಳಿಸಿದ್ದಾರೆ.

ಕಿರಿಯ ಶ್ರೀಗಳಾದ ಶ್ರೀ ವಿಶ್ವ ಪ್ರಸನ್ನತೀರ್ಥರು, ಪ್ರಮುಖರಾದ ಅನ್ಸಾರ್ ಅಹಮ್ಮದ್, ಮೊಹಮ್ಮದ್ ಆರೀಫ್, ಮೊಹಮ್ಮದ್ ಶೀಶ್, ಇಸ್ಮಾಯಿಲ್ ಅತ್ರಾಡಿ ಮೊದಲಾದವರು ಇದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...