alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಹಗಲೇ ಕಳ್ಳರು ಕೈಚಳಕ ತೋರಿದ್ದು ಹೀಗೆ

ram-nagr-car

ರಾಮನಗರ: ರಾಮನಗರದಲ್ಲಿ ಹಾಡಹಗಲೇ ಕಾರಿನ ಗ್ಲಾಸ್ ಒಡೆದು, 1.50 ಲಕ್ಷ ರೂ. ನಗದು ದೋಚಲಾಗಿದೆ.

ಹುಣಸನಹಳ್ಳಿಯ ಚಿಕ್ಕೇಗೌಡ ಎಂಬುವವರಿಗೆ ಸೇರಿದ ವ್ಯಾಗನರ್ ಕಾರನ್ನು ತಾಲ್ಲೂಕು ಕಚೇರಿ ಸಮೀಪ ನಿಲ್ಲಿಸಲಾಗಿತ್ತು.

ಕಳ್ಳರು ಕಾರಿನಲ್ಲಿದ್ದ ಹಣ ದೋಚಿದ್ದಲ್ಲದೇ ಎ.ಟಿ.ಎಂ. ಕಾರ್ಡ್ ಕದ್ದು ಪರಾರಿಯಾಗಿದ್ದಾರೆ. ಬಿಡದಿ ಬಳಿಯ ಎ.ಟಿ.ಎಂ.ನಲ್ಲಿ 40,000 ರೂ. ಹಣ ಡ್ರಾ ಮಾಡಿದ್ದಾರೆ.

ಚಿಕ್ಕೇಗೌಡರ ಮೊಬೈಲ್ ಗೆ ಹಣ ಡ್ರಾ ಆಗಿರುವ ಮೆಸೇಜ್ ಬಂದಿದೆ. ಸ್ಥಳಕ್ಕೆ ಐಜೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...