alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯುತ್ ಪ್ರವಹಿಸಿ ಬಸ್ ನಲ್ಲೇ ಚಾಲಕ ಸಾವು

ರಾಮನಗರ: ವಿದ್ಯುತ್ ಪ್ರವಹಿಸಿ ಬಸ್ ನಲ್ಲೇ ಚಾಲಕ ಸಾವನ್ನಪ್ಪಿದ ಘಟನೆ, ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ಬಳಿ ನಡೆದಿದೆ.

ಲೋಕೇಶ್(35) ಮೃತಪಟ್ಟವರೆಂದು ಗುರುತಿಸಲಾಗಿದೆ. ಮದುವೆ ದಿಬ್ಬಣಕ್ಕೆ ಬಸ್ ನಲ್ಲಿ ಜನರನ್ನು ಕರೆದುಕೊಂಡು ಬಂದಿದ್ದ ಲೋಕೇಶ್ ಜನರೆಲ್ಲಾ ಇಳಿದ ನಂತರ, ಬಸ್ ರಿವರ್ಸ್ ತೆಗೆದಿದ್ದಾರೆ.

ಆಗ, ಹಿಂಭಾಗದಲ್ಲಿದ್ದ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಹೊಡೆದಿದ್ದು, ವಿದ್ಯುತ್ ತಂತಿಗಳು ತುಂಡಾಗಿ ಬಸ್ ಮೇಲೆ ಬಿದ್ದಿವೆ. ಇದರಿಂದಾಗಿ ವಿದ್ಯುತ್ ಪ್ರವಹಿಸಿ ಲೋಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅದೃಷ್ಟವಶಾತ್ ಜನ ಮೊದಲೇ ಇಳಿದಿದ್ದ ಕಾರಣ, ಹೆಚ್ಚಿನ ಅನಾಹುತ ತಪ್ಪಿದೆ. ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...