alex Certify
ಕನ್ನಡ ದುನಿಯಾ       Mobile App
       

Kannada Duniya

ಬಟ್ಟೆ ತೊಳೆಯಲು ಹೋದಾಗಲೇ ದುರಂತ

ರಾಮನಗರ: ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸೇರಿ ನಾಲ್ವರು ಮೃತಪಟ್ಟ ದಾರುಣ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ವಿರುಪಾಕ್ಷಿಪುರದ ರಾಮಯ್ಯನ ಕೆರೆಯಲ್ಲಿ ನಡೆದಿದೆ.

ಮಾಲತಿ(35), ಪೂರ್ಣಿಮಾ(8), ಅನು(10), ನಮ್ರತಾ(10) ಮೃತಪಟ್ಟವರೆಂದು ಗುರುತಿಸಲಾಗಿದೆ. ಮಾಲತಿ ಅವರು ಮಗಳು ಪೂರ್ಣಿಮಾರೊಂದಿಗೆ ಬಟ್ಟೆ ತೊಳೆಯಲು ಹೋಗಿದ್ದು, ಅವರೊಂದಿಗೆ ಪಕ್ಕದ ಮನೆಯ ಮಕ್ಕಳಾದ ಅನು ಮತ್ತು ನಮ್ರತಾ ಅವರೂ ತೆರಳಿದ್ದಾರೆ.

ಮಕ್ಕಳು ನೀರಿನಲ್ಲಿ ಆಟವಾಡುತ್ತಾ ಮುಳುಗಿದ್ದು, ಅವರನ್ನು ರಕ್ಷಿಸಲು ಹೋದ ಮಾಲತಿ ಸೇರಿ ಎಲ್ಲರೂ ಮುಳುಗಿದ್ದಾರೆ. ಹುಡುಕಾಟದ ನಂತರ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಅಕ್ಕೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...