alex Certify
ಕನ್ನಡ ದುನಿಯಾ       Mobile App
       

Kannada Duniya

ವಾಪಾಸ್ ಹೋಗಲು ಹಠ ಹಿಡಿದ ಗುಜರಾತ್ ಶಾಸಕರು

ram-egle-ton

ಬೆಂಗಳೂರು: ನಮ್ಮನ್ನು ಬಿಟ್ಟು ಬಿಡಿ, ಗುಜರಾತ್ ಗೆ ವಾಪಸ್ ಹೋಗುತ್ತೇವೆ ಎಂದು ಗುಜರಾತ್ ಕಾಂಗ್ರೆಸ್ ಶಾಸಕರು ಹಠ ಹಿಡಿದಿದ್ದಾರೆ ಎನ್ನಲಾಗಿದೆ.

ಆಪರೇಷನ್ ಕಮಲದ ಭೀತಿಯಿಂದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ನಾಯಕರು 44 ಶಾಸಕರನ್ನು ರಾಮನಗರದ ಬಿಡದಿ ಬಳಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಇರಿಸಿದ್ದಾರೆ.

ಅವರ ಯೋಗಕ್ಷೇಮವನ್ನು ರಾಜ್ಯದ ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್ ನೋಡಿಕೊಳ್ಳುತ್ತಿದ್ದರು. ಆಗಸ್ಟ್ 2 ರಂದು ಡಿ.ಕೆ. ಶಿವಕುಮಾರ್ ರೆಸಾರ್ಟ್ ನಲ್ಲಿ ತಂಗಿದ್ದ ಸಂದರ್ಭದಲ್ಲಿ ಐ.ಟಿ. ದಾಳಿ ನಡೆಸಲಾಗಿದೆ.

3 ದಿನಗಳಿಂದ ಐ.ಟಿ. ದಾಳಿ ಮುಂದುವರೆದಿದ್ದು, ಇದರಿಂದ ಗುಜರಾತ್ ಕಾಂಗ್ರೆಸ್ ಶಾಸಕರು ನಲುಗಿದ್ದಾರೆ. ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ರೆಸಾರ್ಟ್ ಗೆ ತೆರಳಿ ನಿಮ್ಮೊಂದಿಗೆ ನಾವಿರುತ್ತೇವೆ ಎಂದು ಗುಜರಾತ್ ಶಾಸಕರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.

ಆದರೆ, ಹೆಚ್ಚಿನ ಶಾಸಕರು ಇದಕ್ಕೆ ಒಪ್ಪದೇ ತಮ್ಮನ್ನು ಕಳಿಸಿಕೊಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಕೆಲವು ಶಾಸಕರು ಅನಾರೋಗ್ಯದಿಂದ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಆಗಸ್ಟ್ 8 ರಂದು ಗುಜರಾತ್ ನಲ್ಲಿ ರಾಜ್ಯಸಭೆ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೂ ಇಲ್ಲಿರಲು ಸಾಧ್ಯವೇ ಇಲ್ಲ. ನಮ್ಮನ್ನು ಕಳಿಸಿಕೊಡಿ ಎಂದು ರೆಸಾರ್ಟ್ ನಲ್ಲಿರುವ 10 ಕ್ಕಿಂತ ಅಧಿಕ ಮಂದಿ ಶಾಸಕರು ಹಠ ಹಿಡಿದಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...