alex Certify
ಕನ್ನಡ ದುನಿಯಾ       Mobile App
       

Kannada Duniya

ಕೆರೆಗೆ ಕಾರ್ ಬಿದ್ದು ಮೂವರ ಸಾವು

ರಾಮನಗರ: ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವಾಗಲೇ ಭೀಕರ ದುರಂತ ಸಂಭವಿಸಿದೆ. ಕೆರೆಗೆ ಕಾರ್ ಬಿದ್ದು ಮೂವರು ಸಾವನ್ನಪ್ಪಿದ ಘಟನೆ ರಾಮನಗರ ತಾಲ್ಲೂಕಿನ ಮನಗಾನಹಳ್ಳಿಯಲ್ಲಿ ನಡೆದಿದೆ.

ಚಿದಾನಂದ(24), ಶಶಾಂಕ್(6), ಇಂಪನಾ(4) ಮೃತಪಟ್ಟವರೆಂದು ಹೇಳಲಾಗಿದೆ. 12 ವರ್ಷದ ದಿಲೀಪ್ ಪಾರಾಗಿದ್ದಾನೆ. ಕನಕಪುರ ತಾಲ್ಲೂಕು ಗೊಟ್ಟಿಗೆಹಳ್ಳಿಯ ಇವರು ಹಬ್ಬಕ್ಕೆ ಊರಿಗೆ ಹೋಗುತ್ತಿದ್ದು, ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಕಾರ್ ಕೆರೆಗೆ ಬಿದ್ದಿದೆ.

ಸ್ಥಳಕ್ಕೆ ಬಿಡದಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆಯಲ್ಲಿ ಮುಳುಗಿದ್ದ ಕಾರ್ ನಲ್ಲಿದ್ದ ಮೃತದೇಹಗಳನ್ನು ಸ್ಥಳೀಯರ ನೆರವಿನಿಂದ ಹೊರತೆಗೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...