alex Certify
ಕನ್ನಡ ದುನಿಯಾ       Mobile App
       

Kannada Duniya

ನಾನು ಶಾಸಕ ರಾಮದಾಸ್ ಪತ್ನಿ ಎಂದು ಮತ್ತೆ ಬಂದ್ರು ಪ್ರೇಮಕುಮಾರಿ

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ನನ್ನ ಪತಿ ಎಂದು ಹೇಳಿಕೊಂಡು ಪ್ರೇಮಕುಮಾರಿ, ವಿದ್ಯಾರಣ್ಯಪುರಂ ನಲ್ಲಿರುವ ರಾಮದಾಸ್ ಅವರ ಕಚೇರಿಗೆ ಆಗಮಿಸಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಇಂದು ನಡೆದಿದೆ.

ಶಾಸಕ ರಾಮದಾಸ್ ಅವರ ಕಚೇರಿ ಬಳಿ ಆಗಮಿಸಿದ ಪ್ರೇಮಕುಮಾರಿ, ಚುನಾವಣೆ ಸಂದರ್ಭದಲ್ಲಿ ನನಗೆ ಜೀವನ ನೀಡುವುದಾಗಿ ರಾಮದಾಸ್ ಹೇಳಿದ್ದರು. ಗೆದ್ದ ನಂತರ ಕೈಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಮದಾಸ್ ಅವರಿಗಾಗಿಯೇ ನಾನು ರಾಜಕೀಯ ಕ್ಷೇತ್ರ ಬಿಟ್ಟಿದ್ದೇನೆ ಎಂದು ಹೇಳಿದ ಪ್ರೇಮಾಕುಮಾರಿ, ನನಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಸ್ವಲ್ಪ ಹೊತ್ತಿನ ಬಳಿಕ ವಿಷಯ ತಿಳಿದ ವಿದ್ಯಾರಣ್ಯಪುರಂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಪ್ರೇಮಾಕುಮಾರಿ ಅಲ್ಲಿಂದ ತೆರಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...