alex Certify
ಕನ್ನಡ ದುನಿಯಾ       Mobile App
       

Kannada Duniya

‘ನಮ್ಮ ಚಿಕ್ಕ ಸೇವೆಯನ್ನು ಸ್ಮರಿಸಿಕೊಂಡ ಮುಖ್ಯಮಂತ್ರಿಗಳದ್ದು ದೊಡ್ಡ ಗುಣ’

vijayendraಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅನಾರೋಗ್ಯಕ್ಕೊಳಗಾಗಿ ಬೆಲ್ಜಿಯಂ ಆಸ್ಪತ್ರೆಯಲ್ಲಿದ್ದ ವೇಳೆ ಸಿದ್ದರಾಮಯ್ಯ ಮತ್ತವರ ಕುಟುಂಬ ಸದಸ್ಯರಿಗೆ ತಮ್ಮ ಮನೆಯಿಂದ ಆಹಾರ ತಂದುಕೊಟ್ಟಿದ್ದ ಕನ್ನಡಿಗ ವಿಜಯೇಂದ್ರ ಅವರು, ಖಾಸಗಿ ಸುದ್ದಿ ವಾಹಿನಿ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಪುತ್ರನ ಸಾವಿನ ದುಃಖದಲ್ಲಿದ್ದ ಸಂದರ್ಭದಲ್ಲಿ ಸಾಂತ್ವನ ಹೇಳಿದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೃತಜ್ಞತೆ ಸಲ್ಲಿಸಿದ್ದರಲ್ಲದೇ ಬೆಲ್ಜಿಯಂನಲ್ಲಿದ್ದ ವೇಳೆ, ತಮ್ಮ ಮನೆಯಿಂದ ಆಹಾರ ತಂದುಕೊಟ್ಟಿದ್ದ ವಿಜಯೇಂದ್ರ ಮತ್ತವರ ಪತ್ನಿಯನ್ನು ಸ್ಮರಿಸಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯೇಂದ್ರ, ನಾವುಗಳು ಮಾಡಿದ ಚಿಕ್ಕ ಸೇವೆಯನ್ನು ಸ್ಮರಿಸಿಕೊಳ್ಳುವ ಮೂಲಕ ಮುಖ್ಯಮಂತ್ರಿಗಳು ತಮ್ಮ ದೊಡ್ಡತನ ತೋರಿಸಿದ್ದಾರೆಂದು ವಿನಮ್ರವಾಗಿ ನುಡಿದಿದ್ದಾರೆ.

ತಮ್ಮ ತಾಯಿಯವರಿಗೆ ಫೋನ್ ಮಾಡಿದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಬೆಲ್ಜಿಯಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ತಿಳಿಸಿದ್ದರು. ತಾವು ಕೂಡಲೇ ಅಲ್ಲಿಗೆ ಹೋಗಿದ್ದಾಗಿ ವಿಜಯೇಂದ್ರ ಹೇಳಿದ್ದಾರೆ. ಅಲ್ಲಿ ಸಿದ್ದರಾಮಯ್ಯನವರ ಎರಡನೇ ಪುತ್ರ ಡಾ. ಯತೀಂದ್ರ ಮೊದಲಾದವರಿದ್ದರು. ಮರುದಿನ ಸಿದ್ದರಾಮಯ್ಯ ಆಗಮಿಸಿದರೆಂದು ತಿಳಿಸಿದ ವಿಜಯೇಂದ್ರ, ವಿದೇಶದಲ್ಲಿ ಕರ್ನಾಟಕ ಶೈಲಿಯ ಆಹಾರ ಸಿಗುವುದು ಕಷ್ಟ. ಜೊತೆಗೆ ಅಲ್ಲಿನ ಆಹಾರ ಒಗ್ಗುವುದೂ ಕಷ್ಟ. ಹಾಗಾಗಿ ಮನೆಯಿಂದ ಆಹಾರ ತಂದುಕೊಡುವುದಾಗಿ ನಾನು ಮನವಿ ಮಾಡಿಕೊಂಡೆ. ಆಗ ಸಿದ್ದರಾಮಯ್ಯನವರು ನಿಮಗೆ ತೊಂದರೆಯಾಗುತ್ತದೆ ಎಂದಿದ್ದರೆಂದು ವಿಜಯೇಂದ್ರ ತಿಳಿಸಿದ್ದಾರೆ. ತಾವು ಮತ್ತೆ ಮನವಿ ಮಾಡಿಕೊಂಡ ಬಳಿಕ ಸಿದ್ದರಾಮಯ್ಯನವರು ಒಪ್ಪಿಕೊಂಡರು. ಮನೆಯಲ್ಲಿ ಪತ್ನಿ ಸಿದ್ದಪಡಿಸುತ್ತಿದ್ದ ಅನ್ನ, ಸಾರು, ಮುದ್ದೆಯನ್ನು ಪ್ರತಿನಿತ್ಯ ತೆಗೆದುಕೊಂಡು ಹೋಗುತ್ತಿದ್ದುದ್ದಾಗಿ ವಿಜಯೇಂದ್ರ ಹೇಳಿದ್ದಾರೆ.

ಸದಾ ಮೌನವಾಗಿರುತ್ತಿದ್ದ ಸಿದ್ದರಾಮಯ್ಯನವರು ಅಂತಹ ಪರಿಸ್ಥಿತಿಯಲ್ಲೂ ಬೆಂಗಳೂರಿನ ತಮ್ಮ ಕಛೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕ್ಷಣ ಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಜೊತೆಗೆ ದುಃಖದಲ್ಲಿದ್ದ ಕುಟುಂಬ ಸದಸ್ಯರನ್ನು ಸಂತೈಸುತ್ತಿದ್ದರು. ರಾಕೇಶ್ ರವರು ಸಾವನ್ನಪ್ಪಿದ್ದರಿಂದ ನಮಗೆ ನೋವಾಗಿದೆ ಎಂದ ವಿಜಯೇಂದ್ರ, ಒಂದು ವಾರಗಳ ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗಿದ್ದ ವೇಳೆ ಕೇವಲ ಫೋಟೋ ಹಾಗೂ ಟಿವಿಯಲ್ಲಿ ಮಾತ್ರ ಅವರನ್ನು ನೋಡಿದ್ದ ನನಗೆ ಅವರ ಸರಳತೆಯ ಪ್ರತ್ಯಕ್ಷ ದರ್ಶನವಾಯಿತು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...