alex Certify
ಕನ್ನಡ ದುನಿಯಾ       Mobile App
       

Kannada Duniya

ಯಾರಿಗೆ ಸೋಲು, ಗೆಲುವು? ಕುತೂಹಲ ಮೂಡಿಸಿದೆ ರಾಜ್ಯಸಭೆ ಚುನಾವಣೆ

ರಾಜ್ಯಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದ್ದು, ಗೆಲುವಿಗಾಗಿ 3 ಪಕ್ಷಗಳು ರಣತಂತ್ರ ರೂಪಿಸಿವೆ. ರಾಜ್ಯಸಭೆಯ 4 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದ್ದು, ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಯಾರಿಗೆ ಸೋಲಾಗುತ್ತೆ ಎಂಬುದೇ ರಾಜಕೀಯ ವಲಯದಲ್ಲಿ ಬಹು ಚರ್ಚಿತ ವಿಷಯವಾಗಿದೆ.

ಈಗಾಗಲೇ ರಾಜಕೀಯ ಪಕ್ಷಗಳು ವಿಪ್ ಜಾರಿಗೊಳಿಸಿದ್ದರೂ, ಅಡ್ಡ ಮತದಾನದ ಆತಂಕ ಎದುರಾಗಿದೆ. ಜೆ.ಡಿ.ಎಸ್. ಅಭ್ಯರ್ಥಿಗೆ ಮತಗಳ ಕೊರತೆಯಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಜೆ.ಡಿ.ಎಸ್. ಬಂಡಾಯ ಶಾಸಕರು ಬೀಸೋ ದೊಣ್ಣೆಯಿಂದ ಪಾರಾಗಿದ್ದು, ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ 3 ನೇ ಅಭ್ಯರ್ಥಿ ಹಾಗೂ ಜೆ.ಡಿ.ಎಸ್. ಅಭ್ಯರ್ಥಿ ಗೆಲುವಿನ ಕುರಿತಾಗಿ ಕುತೂಹಲ ಹೆಚ್ಚಾಗಿದೆ.

ಕಾಂಗ್ರೆಸ್ ನಿಂದ ನಾಸೀರ್ ಹುಸೇನ್, ಎಲ್. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್, ಬಿ.ಜೆ.ಪಿ.ಯಿಂದ ರಾಜೀವ್ ಚಂದ್ರಶೇಖರ್, ಜೆ.ಡಿ.ಎಸ್.ನ ಬಿ.ಎಂ. ಫಾರೂಕ್ ಕಣದಲ್ಲಿದ್ದಾರೆ. ಪ್ರತಿ ಅಭ್ಯರ್ಥಿಗೆ 44 ಪ್ರಥಮ ಪ್ರಾಶಸ್ತ್ಯದ ಮತ ಬೇಕಿದೆ. ಕಾಂಗ್ರೆಸ್ ಗೆ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡ ಬಳಿಕ ಉಳಿದ ಮತಗಳಲ್ಲಿ 7 ಬಂಡಾಯ ಶಾಸಕರು, ಪಕ್ಷೇತರರ ನೆರವಿನಿಂದ 3 ನೇ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಅವಕಾಶವಿದೆ.

ಇನ್ನು ಬಿ.ಜೆ.ಪಿ.ಗೆ ಒಬ್ಬರು ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಅವಕಾಶವಿದ್ದು, ರಾಜೀವ್ ಚಂದ್ರಶೇಖರ್ ಗೆಲ್ಲುವುದು ನಿಶ್ಚಿತ. ಜೆ.ಡಿ.ಎಸ್. ಅಭ್ಯರ್ಥಿಗೆ ಮತಗಳ ಅವಶ್ಯಕತೆ ಇದೆ. ಜೆ.ಡಿ.ಎಸ್. ಮುಖ್ಯ ಸಚೇತಕ ಮಧು ಬಂಗಾರಪ್ಪ ಪಕ್ಷದ ಬಂಡಾಯ ಶಾಸಕರಿಗೂ ವಿಪ್ ಜಾರಿ ಮಾಡಿದ್ದು, ಫಾರೂಕ್ ಅವರಿಗೆ ಮತ ಹಾಕಲು ಸೂಚಿಸಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಮತದಾನ ಆರಂಭವಾಗಲಿದೆ. ಯಾರು ಯಾರಿಗೆ ಮತ ಚಲಾವಣೆ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...