alex Certify
ಕನ್ನಡ ದುನಿಯಾ       Mobile App
       

Kannada Duniya

ಅಭ್ಯರ್ಥಿಗಳ ಘೋಷಣೆ, ರಂಗೇರಿದ ರಾಜ್ಯಸಭೆ ಚುನಾವಣಾ ಕಣ

ಬೆಂಗಳೂರು: ರಾಜ್ಯಸಭೆಯ 4 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್, ಬಿ.ಜೆ.ಪಿ., ಜೆ.ಡಿ.ಎಸ್. ಅಭ್ಯರ್ಥಿಗಳನ್ನು ಘೋಷಿಸಿವೆ.

ಕಾಂಗ್ರೆಸ್ ನಿಂದ ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು, ನಾಸೀರ್ ಹುಸೇನ್, ಎಲ್. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಬಿ.ಜೆ.ಪಿ.ಯಿಂದ ರಾಜೀವ್ ಚಂದ್ರಶೇಖರ್ ಸ್ಪರ್ಧಿಸಲಿದ್ದಾರೆ. ಜೆ.ಡಿ.ಎಸ್.ನಿಂದ ಬಿ.ಎಂ. ಫಾರೂಕ್ ಸ್ಪರ್ಧಿಸಲಿದ್ದಾರೆ.

ಕಾಂಗ್ರೆಸ್ 2 ಸ್ಥಾನ, ಬಿ.ಜೆ.ಪಿ. 1 ಸ್ಥಾನವನ್ನು ಸುಲಭವಾಗಿ ಗೆಲ್ಲಲಿವೆ. 4 ನೇ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ನಡುವೆ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ.

224 ಸದಸ್ಯ ಬಲದ ವಿಧಾನಸಭೆಯಲ್ಲಿ 7 ಸ್ಥಾನಗಳು ಖಾಲಿ ಉಳಿದಿದ್ದು, 217 ಮಂದಿ ಶಾಸಕರಿದ್ದಾರೆ. ಕಾಂಗ್ರೆಸ್ 123 ಶಾಸಕರು, ಬಿ.ಜೆ.ಪಿ. 43, ಜೆ.ಡಿ.ಎಸ್. 37, (ಜೆ.ಡಿ.ಎಸ್.ನಿಂದ ಅಮಾನತುಗೊಂಡವರು 7), ಬಿ.ಎಸ್.ಆರ್. ಕಾಂಗ್ರೆಸ್ 3, ಕೆ.ಜೆ.ಪಿ. 2, ಪಕ್ಷೇತರ 8, ಸ್ಪೀಕರ್ 1 ಬಲಾಬಲವಿದೆ.

ಒಬ್ಬ ಅಭ್ಯರ್ಥಿ ಗೆಲುವಿಗೆ 44.4 ಮೊದಲ ಪ್ರಾಶಸ್ತ್ಯದ ಮತಗಳು ಬೇಕಿದೆ. ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು 34 ಮತಗಳು ಉಳಿಯಲಿವೆ. ಜೆ.ಡಿ.ಎಸ್.ನಿಂದ ಅಮಾನತುಗೊಂಡ 7, ಕೆ.ಜೆ.ಪಿ.ಯ ಒಬ್ಬರು, ಪಕ್ಷೇತರ ಶಾಸಕರ ಬೆಂಬಲದಿಂದ 3 ನೇ ಅಭ್ಯರ್ಥಿಯನ್ನು ಗೆಲ್ಲಿಸಬಹುದು. ಬಿ.ಜೆ.ಪಿ. 44 ಮೊದಲ ಪ್ರಾಶಸ್ತ್ಯದ ಮತ ಹೊಂದಿದ್ದು, 2 ನೇ ಪ್ರಾಶಸ್ತ್ಯದ ಮತಗಳಿಂದ ಸುಲಭವಾಗಿ ಗೆಲ್ಲಬಹುದು. ಜೆ.ಡಿ.ಎಸ್. ಬಳಿ 30 ಮತಗಳಿದ್ದು, ಗೆಲ್ಲುವ ಸಾಧ್ಯತೆ ಕಡಿಮೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...