alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಸಕ ರಾಜು ಕಾಗೆ ಕೇಸ್: ನಾಲ್ವರ ಬಂಧನ

arest-kage

ಬೆಳಗಾವಿ: ಕಾಂಗ್ರೆಸ್ ಕಾರ್ಯಕರ್ತ ವಿವೇಕ್ ಶೆಟ್ಟಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ವರನ್ನು ಕಾಗವಾಡ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ತಲೆ ಮರೆಸಿಕೊಳ್ಳಲು ಸಹಕಾರ ನೀಡಿದ್ದ ಶಾಸಕ ರಾಜು ಕಾಗೆ ಸ್ನೇಹಿತ ಶಂಕರ ವಾಗ್ಮೋರೆ, ಸಂಬಂಧಿಕರಾದ ಮಲಗೊಂಡ ಪಾಟೀಲ, ಸುದರ್ಶನ್ ಹಾಗೂ ಬಾರ್ ಮ್ಯಾನೇಜರ್ ರವೀಂದ್ರ ಅವರನ್ನು ಅಥಣಿ ತಾಲ್ಲೂಕಿನ ಉಗಾರಖರ್ದಾ ಪಟ್ಟಣದಲ್ಲಿ ಬಂಧಿಸಲಾಗಿದೆ.

ಪ್ರಕರಣದಲ್ಲಿ ಶಾಸಕ ರಾಜು ಕಾಗೆ ಸೇರಿದಂತೆ, 13 ಮಂದಿ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರಿಗೆ ಈ ನಾಲ್ವರು ಸಹಕಾರ ನೀಡಿದ್ದ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ರಾಜು ಕಾಗೆ ಪುತ್ರಿಯ ಕುರಿತು, ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಬರಹ ಪೋಸ್ಟ್ ಮಾಡಿದ್ದ ಹಿನ್ನಲೆಯಲ್ಲಿ ಮನೆಗೆ ನುಗ್ಗಿ ವಿವೇಕ್ ಶೆಟ್ಟಿ ಹಾಗೂ ಅವರ ತಾಯಿ ಮೇಲೆ ಹಲ್ಲೆ ನಡೆಸಲಾಗಿತ್ತು. ಜನವರಿ 9 ರಂದು ಎಫ್.ಐ.ಆರ್. ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...