alex Certify
ಕನ್ನಡ ದುನಿಯಾ       Mobile App
       

Kannada Duniya

ಎ.ಸಿ. ಹಾಕದೇ ‘ರಾಜಕುಮಾರ’ ಫ್ಯಾನ್ಸ್ ಗೆ ಅವಮಾನ

raj-ku

ಬೆಂಗಳೂರು: ಎ.ಸಿ. ಕಾರಣಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರಪ್ರದರ್ಶನವನ್ನೇ ರದ್ದುಪಡಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ನಾಗವಾರದಲ್ಲಿರುವ ಮಾಲ್ ಒಂದರಲ್ಲಿ ‘ರಾಜಕುಮಾರ’ ಸಿನಿಮಾ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರು, ಸಿನಿಮಾ ಆರಂಭವಾಗಿ 30 ನಿಮಿಷ ಕಳೆದರೂ ಎ.ಸಿ. ಹಾಕದ ಕಾರಣ, ಸಿಬ್ಬಂದಿಗೆ ತಿಳಿಸಿದ್ದಾರೆ.

ಕನ್ನಡ ಚಿತ್ರಗಳಿಗೆ ಎ.ಸಿ. ಹಾಕುವುದಿಲ್ಲ. ಬೇಕಾದರೆ ಸಿನಿಮಾ ನೋಡಿ. ಇಲ್ಲವಾದರೆ ಹೊರಗೆ ಹೋಗಿ ಎಂದು ಉದ್ಧಟತನದಿಂದ ವರ್ತಿಸಿದ್ದಾರೆ.

ಈ ಸಂದರ್ಭದಲ್ಲಿ ವಾಗ್ವಾದ ನಡೆದು, ಕೊನೆಗೆ ಚಿತ್ರ ಪ್ರದರ್ಶನವನ್ನೇ ರದ್ದುಗೊಳಿಸಿ, ಪ್ರೇಕ್ಷಕರನ್ನು ಹೊರಗೆ ಕಳುಹಿಸಿದ್ದಾರೆ.

ಇದೇ ಮಾಲ್ ನಲ್ಲಿ ಬೇರೆ ಭಾಷೆಗಳ ಚಿತ್ರ ಪ್ರದರ್ಶನಕ್ಕೆ ಎ.ಸಿ. ಆನ್ ಮಾಡಲಾಗಿದೆ. ಆದರೆ, ‘ರಾಜಕುಮಾರ’ನ ಅಭಿಮಾನಿಗಳನ್ನು ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...