alex Certify
ಕನ್ನಡ ದುನಿಯಾ       Mobile App
       

Kannada Duniya

ತಗ್ಗಿದ ವರುಣನ ಆರ್ಭಟ: ಸಹಜ ಸ್ಥಿತಿಯತ್ತ ಮಲೆನಾಡು

ಸತತ ಒಂದು ವಾರಗಳ ಕಾಲ ಎಡಬಿಡದೆ ಸುರಿದ ಮಳೆಯಿಂದಾಗಿ ಜನಜೀವನ ಹಾಗೂ ಸಂಚಾರ ಅಸ್ತವ್ಯಸ್ತಗೊಂಡಿದ್ದ ಮಲೆನಾಡಿನಲ್ಲಿ, ನಿನ್ನೆ ಸಂಜೆಯಿಂದ ವರುಣನ ಆರ್ಭಟ ಕಡಿಮೆಯಾಗಿರುವ ಕಾರಣ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.

ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಸತತ ಮಳೆಯ ಕಾರಣ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈಗ ಮಳೆ ಕಡಿಮೆಯಾಗಿರುವ ಕಾರಣ ಇಳಿಮುಖವಾಗುತ್ತಿದೆ. ಗುಡ್ಡ ಕುಸಿತದ ಕಾರಣ ಸಂಚಾರ ಬಂದ್ ಆಗಿದ್ದ ಚಾರ್ಮಾಡಿ ಘಾಟ್ ಈಗ ಪುನರಾರಂಭಗೊಂಡಿದೆ. ಸದ್ಯ ಕಾರು ಮತ್ತು ಬೈಕ್ ಸಂಚಾರಕ್ಕೆ ಮಾತ್ರ ಚಾರ್ಮಾಡಿ ಘಾಟಿಯಲ್ಲಿ ಅನುವು ಮಾಡಿಕೊಡಲಾಗಿದ್ದು, ಇಂದಿನಿಂದ ಟ್ರಕ್ ಹಾಗೂ ಬಸ್ ಗಳ ಸಂಚಾರಕ್ಕೆ ಅನುಮತಿ ನೀಡುವ ನಿರೀಕ್ಷೆ ಇದೆ.

ಜನಜೀವನ ಸಹಜ ಸ್ಥಿತಿಗೆ ಮರಳಿರುವ ಕಾರಣ ಶಾಲಾ- ಕಾಲೇಜುಗಳು ಆರಂಭವಾಗಲಿವೆ. ರಸ್ತೆಗೆ ಉರುಳಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ವಾಹನ ಸಂಚಾರ ಎಂದಿನಂತೆ ಆರಂಭವಾಗಿದೆ. ಭಾರಿ ಮಳೆಯ ಕಾರಣ ಜಲಾವೃತವಾಗಿದ್ದ ಐತಿಹಾಸಿಕ ಶೃಂಗೇರಿ ಶಾರದಾಂಬೆ ಕ್ಷೇತ್ರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...