alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಹೀಗಿರಲಿದೆ ರೈಲ್ವೇ ಟಿಕೇಟ್…!

ಭಾರತೀಯ ರೈಲ್ವೇ ಇಲಾಖೆ ಕನ್ನಡಿಗರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ರೈಲ್ವೇ ಟಿಕೇಟ್ ನಲ್ಲಿ ಇಂಗ್ಲೀಷ್, ಹಿಂದಿ ಜೊತೆ ಕನ್ನಡವೂ ರಾರಾಜಿಸಲಿದೆ.

ಕನ್ನಡಿಗರ ಬಹುದಿನಗಳ ಬೇಡಿಕೆಯನ್ನು ಈ ಮೂಲಕ ರೈಲ್ವೇ ಇಲಾಖೆ ಈಡೇರಿಸಿದ್ದರೂ ರೈಲು ನಿಲ್ದಾಣದ ಕೌಂಟರ್ ನಲ್ಲಿ ದೊರೆಯುವ ಟಿಕೇಟ್ ಗಳ ಮೇಲೆ ಮಾತ್ರ ಕನ್ನಡ ಮುದ್ರಣವಿರಲಿದೆ. ಆನ್ ಲೈನ್ ಟಿಕೇಟ್ ಈ ಹಿಂದಿನಂತೆ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಅದರಲ್ಲೂ ಕನ್ನಡ ಭಾಷೆ ಮುದ್ರಣವಾಗುವ ನಿರೀಕ್ಷೆ ಇದೆ.

ರೈಲ್ವೇ ಇಲಾಖೆಯಲ್ಲಿ ಹಿಂದಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿ ಈ ಹಿಂದೆ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸಿದ್ದವು. ಅಲ್ಲದೇ ಮೆಟ್ರೋ ನಿಲ್ದಾಣದಲ್ಲಿ ಅಳವಡಿಸಿದ್ದ ಹಿಂದಿ ಫಲಕಗಳಿಗೆ ಮಸಿ ಬಳಿದಿದ್ದರು. ಹೋರಾಟಕ್ಕೆ ಮಣಿದಿರುವ ರೈಲ್ವೇ ಇಲಾಖೆ ಇದೀಗ ಟಿಕೇಟ್ ಗಳ ಮೇಲೆ ಕನ್ನಡದಲ್ಲಿಯೂ ವಿವರಗಳನ್ನು ಮುದ್ರಿಸಲು ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...